ತಿರುವಣ್ಣೂರ್ ದೇವಾಲಯದ ಆವರಣ ಗೋಡೆಯಲ್ಲಿ ಚಿತ್ತಾರ ಬಿಡಿಸಿದ ಹಫೀಸಾ

7

ತಿರುವಣ್ಣೂರ್ ದೇವಾಲಯದ ಆವರಣ ಗೋಡೆಯಲ್ಲಿ ಚಿತ್ತಾರ ಬಿಡಿಸಿದ ಹಫೀಸಾ

Published:
Updated:

ಕೋಯಿಕ್ಕೋಡ್: ಇಲ್ಲಿನ ತಿರುವಣ್ಣೂರ್ ಸುಬ್ರಮಣ್ಯ ದೇವಾಲಯದಲ್ಲಿ ಹಿಂದೂ ಧರ್ಮದವರಿಗೆ ಮಾತ್ರವಲ್ಲ ಇತರ ಧರ್ಮದವರಿಗೂ ನಂಬಿಕೆ ಇದೆ. ಹಾಗಾಗಿ ಸ್ಕಂದ ಷಷ್ಠಿಯಂದು ನಡೆಯುವ ಶೂರ ಸಂಹಾರ ಕಾರ್ಯಕ್ರಮ ಎಲ್ಲ ಧರ್ಮದ ಆಚರಣೆಯಾಗಿ ಇಲ್ಲಿ ಆಚರಿಸಲಾಗುತ್ತದೆ.
 ಪ್ರತೀ ವರ್ಷವೂ ಇಲ್ಲಿ ಜಾತ್ರೆ  ನಡೆಯುತ್ತಿದ್ದರೂ, ಈ ತಿಂಗಳು 13ರಂದು ನಡೆಯುವ ಜಾತ್ರೆಗೆ ವಿಶೇಷ ಎಂದೆನಿಸಿಕೊಂಡಿದೆ. ಜಾತ್ರೆಯ ಪ್ರಯುಕ್ತ ದೇವಾಲಯದ ಆವರಣ ಗೋಡೆಗೆ ಬಣ್ಣ ಬಳಿಯಲಾಗಿದೆ. ಈ ಗೋಡೆಯನ್ನು ಚಿತ್ರಗಳಿಂದ ಅಲಂಕರಿಸಿದ್ದು ಮುಸ್ಲಿಂ ಹುಡುಗಿ ಹಫೀಸಾ.  ಕೈದಪ್ಪಾಯಲ್ ಲೀಸಾ ಕಾಲೇಜಿನಲ್ಲಿ ಅಂತಿಮ ವರ್ಷ ಪದವಿ ವಿದ್ಯಾರ್ಥಿನಿಯಾಗಿರುವ ಹಫೀಸಾ.ವಿ ಎಂಬ ಹೆಸರಿನ  ಈ ಹುಡುಗಿಗೆ ಪ್ರೋತ್ಸಾಹ ನೀಡಲು ಆಕೆಯ ಅಪ್ಪ ಮತ್ತು ಸಹೋದರಿಯರು ಜತೆಗಿದ್ದಾರೆ.

ತಿರುವಣ್ಣೂರಿನ ಶೂರಸಂಹಾರ ಜಾತ್ರೆಗೆ ಶತಮಾನಗಳ ಇತಿಹಾಸವಿದೆ. ದೇವಾಯದ ಗೋಡೆಯಲ್ಲಿ ಚಿತ್ತಾರ ಬಿಡಿಸುವ ಆಗ್ರಹ ಬಗ್ಗೆ  ಹಫೀಸಾ, ಅಪ್ಪ ಹನೀಫಾ ಅವರಿಗೆ ತಿಳಿಸಿದ್ದರು. ಹನೀಫಾ ಅವರು ದೇವಾಲಯದ ಪಕ್ಕದಲ್ಲಿಯೇ ವ್ಯಾಪಾರ ಮಾಡುತ್ತಿದ್ದಾರೆ. ಮಗಳು ಹೇಳಿದ ವಿಷಯವನ್ನು ಹನೀಫಾ ಅವರು ದೇವಾಲಯದ ಸಮಿತಿ ಅವರಿಗೆ ತಿಳಿಸಿದ್ದರು. ದೇವಾಲಯದ ಸಮಿತಿ ಮರುಮಾತಿಲ್ಲದೆ ಹಫೀಸಾ ಅವರ ಆಗ್ರಹಕ್ಕೆ ಸಮ್ಮತಿಸಿದ್ದರು.
ಕಳೆದ 30 ವರ್ಷಗಳಿಂದ ದೇವಸ್ಥಾನದ ಜಾತ್ರೆಗೆ ಸಹಕರಿಸುತ್ತಿರುವ ವ್ಯಕ್ತಿ ನಾನು ಎಎಂದು ಹನೀಫಾ ಹೇಳಿದ್ದಾರೆ. ತಿರುವಣ್ಣೂರ್ ನಾಟ್ಟು ವರ್ತಮಾನಂ ಎಂಬ ವಾಟ್ಸ್ ಆ್ಯಪ್ ಗುಂಪಿನ ಸಕ್ರಿಯ ಸದಸ್ಯರೂ ಆಗಿದ್ದಾರೆ ಇವರು.
ಕಳೆದ ಭಾನುವಾರ  ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಹಫೀಸಾ ದೇವಾಲಯದ ಆವರಣ ಗೋಡೆಯಲ್ಲಿ ಚಿತ್ರ ಬಿಡಿಸಿದ್ದಾರೆ. ಸೋಮವಾರ, ಮಂಗಳವಾರ, ಬುಧವಾರ ಸಂಜೆ 6 ಗಂಟೆಯಿಂದ 10 ಗಂಟೆವರೆಗೆ  ಪೇಟಿಂಗ್ ಮಾಡಿದ್ದಾರೆ. ಸಹೋದರಿಯರಾದ ಹುದಾ ಮತ್ತು ಫಿದಾ, ಹಫೀಸಾ ಅವರಿಗೆ ಜತೆಯಾದರೆ ರಾತ್ರಿ ವೇಳೆ ಅಪ್ಪ ಹನೀಫಾ ಸಹಾಯ ಮಾಡುತ್ತಾರೆ.
 ತಮಿಳುನಾಡಿನ ದೇವಾಲಯದಲ್ಲಿ ಶೂರ ಸಂಹಾರ ಕಾರ್ಯಗಳು ನಡೆಯುತ್ತಿದ್ದರೂ ಕೇರಳದ ತಿರುವಣ್ಣೂರ್ ಸೇರಿದಂತೆ ಕೆಲವೇ ಕೆಲವು ದೇವಾಲಯಗಳಲ್ಲಿ ಈ ಕಾರ್ಯ ನಡೆಯುತ್ತದೆ.

ಸುದ್ದಿ ಕೃಪೆ: ಮಲಯಾಳ ಮನೋರಮ

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !