ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯನ್ನು ರಾಷ್ಟ್ರಪಿತ ಎಂದಾಗ ಹೆಮ್ಮೆಪಡದವರು ಭಾರತೀಯರಲ್ಲ: ಜಿತೇಂದ್ರ ಸಿಂಗ್

Last Updated 25 ಸೆಪ್ಟೆಂಬರ್ 2019, 12:58 IST
ಅಕ್ಷರ ಗಾತ್ರ

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ರಾಷ್ಟ್ರಪಿತ’ ಎಂದು ಕರೆದಿರುವುದಕ್ಕೆ ಹೆಮ್ಮೆಪಡದವರು ಭಾರತೀಯರಲ್ಲ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ನಿರ್ವಹಣೆಯ ಕೇಂದ್ರೀಕೃತ ವ್ಯವಸ್ಥೆಯ (ಸಿಪಿಜಿಆರ್‌ಎಎಂಎಸ್) ಸುಧಾರಣಾ ಕಾರ್ಯಕ್ರಮದ ಉದ್ಘಾಟನೆ ಸಂದರ್ಭ ಮಾತನಾಡಿದ ಅವರು, ಭಾರತಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಮನ್ನಣೆ ಈಗ ಸಿಗುತ್ತಿದೆ ಎಂದಿದ್ದಾರೆ.

‘ವಿದೇಶಗಳಲ್ಲಿ ನೆಲೆಸಿರುವವರು ತಾವು ಭಾರತೀಯರು ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಿದ್ದಾರೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಮತ್ತು ವೈಯಕ್ತಿಕ ಪ್ರಭಾವ’ ಎಂದು ಸಚಿವರು ಹೇಳಿದ್ದಾರೆ.

‘ಬಹುಶಃ ಪ್ರಧಾನಿ ಮೋದಿಯವರೇ ಭಾರತದ ರಾಷ್ಟ್ರಪಿತ’ ಎಂಬ ಡೊನಾಲ್ಡ್ ಟ್ರಂಪ್ ಹೇಳಿಕೆ ಕುರಿತು ಪ್ರತಿಕ್ರಿಯೆ ಕೇಳಿದಾಗ ಮಾತನಾಡಿದ ಜಿತೇಂದ್ರ ಸಿಂಗ್, ಭಾರತದ ಪ್ರಧಾನಿ ಬಗ್ಗೆ ಅಮೆರಿಕದ ಯಾವೊಬ್ಬ ಅಧ್ಯಕ್ಷರೂ ಈ ರೀತಿ ಹೇಳಿಕೆ ನೀಡಿದ್ದನ್ನು ಕೇಳಿಲ್ಲ. ಅಮೆರಿಕ ಮತ್ತು ಅದರ ಅಧ್ಯಕ್ಷರಿಂದ ನಿಷ್ಪಕ್ಷಪಾತ, ದಿಟ್ಟ ಹೇಳಿಕೆ ಮೂಡಿಬಂದಾಗ ರಾಜಕೀಯ, ಪಕ್ಷ ಹಾಗೂ ಸಿದ್ಧಾಂತದ ಎಲ್ಲೆಗಳನ್ನು ಮೀರಿ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡಬೇಕೆಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಒಬ್ಬರೇ ರಾಷ್ಟ್ರಪಿತ ಎಂದು ಕಾಂಗ್ರೆಸ್‌ನವರು ಪ್ರತಿಪಾದಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಕಾಂಗ್ರೆಸ್‌ನವರು ಟ್ರಂಪ್ ಜತೆ ವಾದ ಮಾಡಲಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT