ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯನಾಡ್: ಲೋಕಸಭಾ ಚುನಾವಣೆ ಕಣದಲ್ಲಿದ್ದಾರೆ ಮೂವರು 'ರಾಹುಲ್ ಗಾಂಧಿ'! 

Last Updated 6 ಏಪ್ರಿಲ್ 2019, 5:09 IST
ಅಕ್ಷರ ಗಾತ್ರ

ವಯನಾಡ್: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಆದರೆ ಇಲ್ಲಿ ರಾಹುಲ್ ಗಾಂಧಿ ಎಂಬ ಹೆಸರಿನ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಕಣಕ್ಕಿಳಿದಿರುವುದು ವಿಶೇಷ. ರಾಹುಲ್ ಗಾಂಧಿ ವಿರುದ್ಧರಾಹುಲ್ ಗಾಂಧಿ ಕೆ.ಇ ಮತ್ತು ರಾಗುಲ್ ಗಾಂಧಿ.ಕೆ ಎಂಬ ಹೆಸರಿನ ಇಬ್ಬರು ಅಭ್ಯರ್ಥಿಗಳು ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ನಾಮಪತ್ರ ಸಲ್ಲಿಸಿದ ಕೆಲವೇ ಕ್ಷಣದಲ್ಲಿ33ರ ಹರೆಯದ ರಾಹುಲ್ ಗಾಂಧಿ. ಕೆ. ಇ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕೋಟ್ಟಯಂಎರುಮೇಲಿ ಗ್ರಾಮದ ನಿವಾಸಿಯಾಗಿರುವ ರಾಹುಲ್ ಗಾಂಧಿ.ಕೆ.ಇ, ಜಾನಪದ ಸಂಗೀತ ಕ್ಷೇತ್ರದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.ಇವರ ಸಹೋದರನ ಹೆಸರು ರಾಜೀವ್ ಗಾಂಧಿ.ಕೆ.ಇ.

ರಾಹುಲ್ ಗಾಂಧಿ.ಕೆ.ಇ. ಅವರ ಅಪ್ಪ ದಿವಂಗತಕುಂಜುಮೋನ್ ಅವರು ಚಾಲಕರಾಗಿದ್ದರು.ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ಗಾಂಧಿ ಕುಟುಂಬದ ಅಭಿಮಾನಿಯಾಗಿದ್ದ ಕುಂಜುಮೋನ್ ಮಕ್ಕಳಿಗೆ ರಾಹುಲ್ ಗಾಂಧಿ ಮತ್ತು ರಾಜೀವ್ ಗಾಂಧಿ ಎಂಬ ಹೆಸರಿಟ್ಟಿದ್ದಾರೆ. ನಾಮಪತ್ರ ಸಲ್ಲಿಕೆ ಆದ ಕೂಡಲೇ ರಾಹುಲ್ ಗಾಂಧಿ ಫೋನ್ ಸ್ವಿಚ್ ಆಫ್ ಮಾಡಿದ್ದು, ಅವರ ಸಹೋದರ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಕುಂಜುಮೋನ್ ಅವರು ಅಪ್ಪಟ ಕಾಂಗ್ರೆಸ್ಸಿಗರಾಗಿದ್ದರು. ಆದರೆ ಅವರ ಮಕ್ಕಳು ಕಾಂಗ್ರೆಸ್ ಪಕ್ಷದವರಲ್ಲ.ಅವರ ಮಗ ರಾಜೀವ್ ಸಿಪಿಎಂ ಕಾರ್ಯಕರ್ತನಾಗಿದ್ದಾನೆ.ಕುಂಜುಮೋನ್ ಅವರ ಪತ್ನಿ ದಿನಕೂಲಿ ಕೆಲಸ ಮಾಡುತ್ತಿದ್ದಾರೆ.

'ರಾಹುಲ್ ಚುನಾವಣಾ ಕಣಕ್ಕಿಳಿಯುವ ಬಗ್ಗೆ ಅವರ ಮನೆಯಲ್ಲಿಯೂ ಗೊತ್ತಿಲ್ಲ ಎಂದು ಅನಿಸುತ್ತಿದೆ.ಅವರು ನಾಮಪ್ತರ ಸಲ್ಲಿಸಿದ ಸುದ್ದಿ ಕೇಳಿ ಅಲ್ಲಿನ ಗ್ರಾಮದವರಿಗೇ ಅಚ್ಚರಿಯಾಗಿದೆ' ಎಂದು ಪಂಚಾಯತ್ ಸದಸ್ಯ ಪ್ರಕಾಶ್ ಪುಲ್ಲಿಕ್ಕಲ್ ಹೇಳಿದ್ದಾರೆ.


ವಯನಾಡಿನಲ್ಲಿ ಸ್ಪರ್ಧೆಗಿಳಿದಿರುವ ಇನ್ನೊಬ್ಬ ಅಭ್ಯರ್ಥಿ ಹೆಸರು ರಾಗುಲ್ ಗಾಂಧಿ.ಕೆ.ಇವರು ತಮಿಳುನಾಡಿನ ಕೊಯಂಬತ್ತೂರಿನವರು. 30ರ ಹರೆಯದ ರಾಗುಲ್ ಅಖಿಲ ಇಂಡಿಯಾ ಮಕ್ಕಳ್ ಕಳಗಂಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

'ನನ್ನ ಅಪ್ಪ ಕೃಷ್ಣನ್. ಪಿ, ಸ್ಥಳೀಯ ಕಾಂಗ್ರೆಸ್ ನಾಯಕರಾಗಿದ್ದರು.ಆನಂತರಅವರು ಎಐಎಡಿಎಂಕೆ ಪಕ್ಷಕ್ಕೆ ಸೇರಿದರು.ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನಾನು ಹುಟ್ಟಿದ್ದು. ಹಾಗಾಗಿ ನನಗೆ ರಾಗುಲ್ ಗಾಂಧಿ ಎಂದು ಹೆಸರಿಟ್ಟರು.ನನ್ನ ಸಹೋದರಿ ಹೆಸರು ಇಂದಿರಾ ಪ್ರಿಯದರ್ಶಿನಿ.ನನಗೆ ಅಪ್ಪ ಆ ಹೆಸರಿಟ್ಟಿದ್ದರಿಂದಲೇ ನನಗೆಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಲು ಸಹಾಯವಾಯಿತು' ಅಂತಾರೆ ರಾಗುಲ್ ಗಾಂಧಿ.

ಅಂದಹಾಗೆ ಈ ರಾಗುಲ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಇದೇ ಮೊದಲೇನೂ ಅಲ್ಲ.2016ರಲ್ಲಿ ಅವರು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸಿಂಗನಲ್ಲೂರು ಚುನಾನಣಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2014ರಲ್ಲಿ ಕೊಯಂಬತ್ತೂರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಮತ್ತೊಬ್ಬ ಗಾಂಧಿ!
ರಾಹುಲ್ ಗಾಂಧಿ ಜತೆಗೆ ಸ್ಪರ್ಧೆಗಿಳಿದಿರುವ ಮತ್ತೊಬ್ಬ ಅಭ್ಯರ್ಥಿ ಹೆಸರು ಕೆ.ಎಂ. ಶಿವಪ್ರಸಾದ್ ಗಾಂಧಿ. 40ರ ಹರೆಯದ ಶಿವ ಪ್ರಸಾದ್ ತ್ರಿಶ್ಶೂರ್ ಜಿಲ್ಲೆಯ ಶಾಲೆಯೊಂದರಲ್ಲಿ ಸಂಸ್ಕೃತ ಶಿಕ್ಷಕರಾಗಿದ್ದಾರೆ.

ನಾನು ಇಂಡಿಯನ್ ಗಾಂಧೀಯನ್ ಪಾರ್ಟಿ (ಕೇರಳದಲ್ಲಿ ಇಂಥದೊಂದು ಪಕ್ಷ ಇಲ್ಲ)ಯಿಂದ ಕಣಕ್ಕಳಿದಿದ್ದೇನೆ.ನನ್ನ ಅಪ್ಪ ಕೆ.ಕೆ. ಮುಕುಂದನ್ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು.ಆದರೆ ನನ್ನ ಹೆಸರಿನೊಂದಿಗಿರುವ ಗಾಂಧಿಗೂ ನನ್ನ ಅಪ್ಪನ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ.ಮೂರು ವರ್ಷಗಳ ಹಿಂದೆ ನಾನು ಗಾಂಧಿಯನ್ ಪಾರ್ಟಿಗೆಸೇರಿದೆ. ಹಾಗಾಗಿ ಹೆಸರಿನೊಂದಿಗೆ ಗಾಂಧಿ ಸೇರಿಸಿ ಹೆಸರನ್ನು ಅಧಿಕೃತವಾಗಿ ಬದಲಾಯಿಸಿದ್ದೇನೆ.

ಎಲ್ಲ ಗ್ರಾಮಗಳನ್ನು ಸ್ವಾವಲಂಬಿ ಗ್ರಾಮಗಳನ್ನಾಗಿ ಮಾಡುವುದು ನಮ್ಮ ಉದ್ದೇಶ, ಕಳೆದ ಹತ್ತು ವರ್ಷಗಳಿಂದ ನಾನು ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ನಮ್ಮ ಉದ್ದೇಶದ ಬಗ್ಗೆ ತಿಳಿಸಬೇಕೆಂದು ಪ್ರಯತ್ನಿಸುತ್ತಲೇ ಇದ್ದೇನೆ. ಆದರೆ ನನಗೆ ಅವಕಾಶ ಸಿಗಲಿಲ್ಲ ಎಂದು ಶಿವ ಪ್ರಸಾದ್ ಗಾಂಧಿ ಹೇಳಿದ್ದಾರೆ.

ಅಂದಹಾಗೆ ಮತದಾರರನ್ನು ಗೊಂದಲಕ್ಕೀಡುಮಾಡುವುದಕ್ಕಾಗಿ ಒಂದೇ ಹೆಸರಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕೆಲಸವನ್ನು ಕೆಲವು ಪಕ್ಷಗಳು ಮಾಡುತ್ತಿವೆ. ಆದರೆ ಇದೇ ಮೊದಲ ಬಾರಿ ಇವಿಎಂನಲ್ಲಿ ಅಭ್ಯರ್ಥಿಗಳ ಹೆಸರು, ಚಿಹ್ನೆ ಜತೆ ಫೋಟೊ ಕೂಡಾ ಇರುವುದರಿಂದ ಮತದಾರರ ಗೊಂದಲ ಕಡಿಮೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT