ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ನ ಮೂವರು ಪ್ರಜೆಗಳ ಬಂಧನ

ಅಕ್ರಮ ಚಿನ್ನ ಸಾಗಾಟ: ₹ 23 ಲಕ್ಷ ಮೌಲ್ಯದ ನಗ ವಶಕ್ಕೆ
Last Updated 16 ಜೂನ್ 2019, 13:21 IST
ಅಕ್ಷರ ಗಾತ್ರ

ಜೈಪುರ : ಬಾರಮೇರ್‌ ಜಿಲ್ಲೆಯ ಮುನಬಾವ್‌ ರೈಲು ನಿಲ್ದಾಣದಲ್ಲಿ ಪಾಕಿಸ್ತಾನದಮೂವರು ಪ್ರಜೆಗಳನ್ನು ಬಂಧಿಸಲಾಗಿದ್ದು, ಅವರಿಂದ ₹ 23 ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳನ್ನು ಕಿಶೋರ್‌ ಕುಮಾರ್‌ ಮಹೇಶ್ವರಿ, ರಮೇಶ್‌ ಪತ್ರ್ ಮತ್ತು ಕೈಲಾಶ್‌ ಮಾಲಿ ಎಂದು ಗುರುತಿಸಲಾಗಿದೆ. ಬಂಧಿತರಿಂದ100 ಗ್ರಾಂ ತೂಕದ 5 ಚಿನ್ನದ ಗಟ್ಟಿಗಳು, ಬಳೆ ಮತ್ತು ಮೂರು ಉಂಗುರಗಳು ಸೇರಿದಂತೆ 700 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ ಎಂದು ಕಸ್ಟಂ ಅಧಿಕಾರಿಗಳು ಭಾನುವಾರ ಮಾಹಿತಿ ನೀಡಿದ್ದಾರೆ.

ಬಂಧಿತರು ಥಾರ್‌ ರೈಲಿನ ಮೂಲಕ ಪ್ರಯಾಣಿಕರ ಸೋಗಿನಲ್ಲಿ ಭಾರತವನ್ನು ಪ್ರವೇಶಿಸಿದ್ದರು. ಇವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ದಂಧೆಯಲ್ಲಿ ತೊಡಗಿರುವವರ ಮಾಹಿತಿ ಸಂಗ್ರಹಿಸಲಾಗುತ್ತಿದೆ.ಇದೇ ಮಾದರಿಯ ಘಟನೆ ಶನಿವಾರ ಕೂಡನಡೆದಿದ್ದು, ರಾಮಚಂದ್ರ ಎಂಬ ಪಾಕಿಸ್ತಾನಿಯಿಂದ ₹1.50 ಲಕ್ಷ ಮೌಲ್ಯದ ಉಡುಪುಗಳನ್ನು ವಶಕ್ಕೆ ಪಡೆಯಲಾಗಿತ್ತು. ಆತನಿಗೆ₹ 50,500 ದಂಡ ವಿಧಿಸಿ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT