29 ಗಂಟೆ ಕಾರ್ಯಾಚರಣೆ: ಕೊಳವೆ ಬಾವಿಯಲ್ಲಿ ಸಿಲುಕಿದ್ದ ಬಾಲಕಿ ರಕ್ಷಣೆ

7

29 ಗಂಟೆ ಕಾರ್ಯಾಚರಣೆ: ಕೊಳವೆ ಬಾವಿಯಲ್ಲಿ ಸಿಲುಕಿದ್ದ ಬಾಲಕಿ ರಕ್ಷಣೆ

Published:
Updated:

ಮುಗೆರ್‌(ಬಿಹಾರ): ಇಲ್ಲಿನ ಮುರ್ಗಿಯಾಚಕ್‌ ಪ್ರದೇಶದಲ್ಲಿರುವ ಸುಮಾರು 100 ಅಡಿಗಳಷ್ಟು ಆಳದ ಕೊಳವೆ ಬಾವಿಯೊಂದರಲ್ಲಿ ಸಿಲುಕಿದ್ದ ಮೂರು ವರ್ಷದ ಬಾಲಕಿಯನ್ನು 29 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿದೆ.

ಬ್ಯಾಂಕ್‌ ಉದ್ಯೋಗಿಯಾಗಿರುವ ಜಿಲ್ಲೆಯ ಚೈತಿ ದುರ್ಗಾ ಮಂದಿರ್‌ ಪ್ರದೇಶದ ನಿವಾಸಿ ನಾಚಿಕೇತ್‌ ಶಾ ಅವರ ಮಗಳು ಸನಾ ಬಾವಿಯಲ್ಲಿ ಸಿಲುಕಿಕೊಂಡಿದ್ದವರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್‌) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್‌) ಜಂಟಿ ಕಾರ್ಯಾಚರಣೆ ನಡೆಸಿ ಬುಧವಾರ ರಾತ್ರಿ 9.30ರ ವೇಳೆಗೆ ರಕ್ಷಿಸಿವೆ.

ಸದ್ಯ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ‘ಆರೋಗ್ಯ ಸ್ಥಿರವಾಗಿದೆ’ ಎಂದು ವೈದ್ಯರು ತಿಳಿಸಿದ್ದಾರೆ.

ತಾತನ ಊರಲ್ಲಿ ಮಕ್ಕಳೊಂದಿಗೆ ಆಟವಾಡುವ ವೇಳೆ ಮಂಗಳವಾರ ಕೊಳವೆ ಬಾವಿಗೆ ಬಿದ್ದಿದ್ದರು.

ಬರಹ ಇಷ್ಟವಾಯಿತೆ?

 • 26

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !