ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ 2,967 ಹುಲಿ, ಅತ್ಯಂತ ಸುರಕ್ಷಿತ ಸ್ಥಾನ ಭಾರತ

Last Updated 29 ಜುಲೈ 2019, 20:06 IST
ಅಕ್ಷರ ಗಾತ್ರ

ನವದೆಹಲಿ:ಹುಲಿಗಳ ಅತಿ ದೊಡ್ಡ ಆವಾಸಸ್ಥಾನ ಮತ್ತು ಹುಲಿಗಳಿಗೆ ಅತ್ಯಂತ ಸುರಕ್ಷಿತ ಸ್ಥಾನ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. 2018ರ ಗಣತಿ ಪ್ರಕಾರ ದೇಶದಲ್ಲಿ ಒಟ್ಟು 2,967 ಹುಲಿಗಳಿವೆ. ಜಗತ್ತಿನಲ್ಲಿರುವ ಹುಲಿಗಳ ಪೈಕಿ ಶೇ 75ರಷ್ಟು ಭಾರತದಲ್ಲಿಯೇ ಇವೆ. ಜತೆಗೆ, ಹುಲಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದು ಗುಣಾತ್ಮಕ ವಿಚಾರವಾಗಿದೆ. 2014ರ ಗಣತಿಗೆ ಹೋಲಿಸಿದರೆ ಈ ಬಾರಿ ಹುಲಿಗಳ ಸಂಖ್ಯೆಯ ಏರಿಕೆ ಪ್ರಮಾಣ ಶೇ 33ರಷ್ಟಾಗಿದೆ.

ಕರ್ನಾಟಕ ರಾಜ್ಯದಲ್ಲಿಯೂ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದರೆ, ಕಳೆದ ಗಣತಿಯಲ್ಲಿ ಮೊದಲ ಸ್ಥಾನದಲ್ಲಿ ರಾಜ್ಯ ಇತ್ತು. ಈ ಬಾರಿ ಅಲ್ಪ ಅಂತರದಲ್ಲಿ ಈ ಸ್ಥಾನ ಕೈತಪ್ಪಿದೆ. ಕರ್ನಾಟಕವನ್ನು ಎರಡನೇ ಸ್ಥಾನಕ್ಕೆ ತಳ್ಳಿ ಮಧ್ಯಪ್ರದೇಶ ಪ್ರಥಮ ಸ್ಥಾನದಲ್ಲಿ ವಿರಾಜಮಾನವಾಗಿದೆ. ಗಣತಿ ವರದಿಯನ್ನು ‘ಹುಲಿ ದಿನ’ವಾದ ಜುಲೈ 29ರಂದು (ಸೋಮವಾರ) ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ.

* 2,967 ದೇಶದಲ್ಲಿ ಈಗ ಇರುವ ಹುಲಿಗಳ ಸಂಖ್ಯೆ

* 2,226 2014ರ ಗಣತಿಯ ಸಂದರ್ಭದಲ್ಲಿ ಇದ್ದ ಹುಲಿಗಳ ಸಂಖ್ಯೆ

* 33% ಏರಿಕೆ ಪ್ರಮಾಣ

ಅತಿ ಹೆಚ್ಚು ಹುಲಿಗಳಿರುವ ರಾಜ್ಯಗಳು

ಮಧ್ಯಪ್ರದೇಶ;526

ಕರ್ನಾಟಕ;524

ಉತ್ತರಾಖಂಡ;442

ಸಂಕಲ್ಪ ಸಿದ್ಧಿ

2022ರ ಹೊತ್ತಿಗೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಬೇಕು ಎಂಬ ನಿರ್ಧಾರವನ್ನು ಒಂಬತ್ತು ವರ್ಷಗಳ ಹಿಂದೆ ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಮಾಡಲಾಗಿತ್ತು. ಈ ಗುರಿಯನ್ನು ನಾವು ಭಾರತೀಯರು ನಾಲ್ಕು ವರ್ಷ ಮೊದಲೇ ಸಾಧಿಸಿದ್ದೇವೆ. ಇದು ಸಂಕಲ್ಪ ಸಿದ್ಧಿ ಅತ್ಯುತ್ತಮ ನಿದರ್ಶನ

–ನರೇಂದ್ರ ಮೋದಿ, ಪ್ರಧಾನಿ

ಆಧಾರ: ಹುಲಿ ಗಣತಿ ವರದಿ 2018

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT