ಹುಲಿಗಳ ಸಂಖ್ಯೆ ಮೂರರಷ್ಟಾಗುವ ಸಾಧ್ಯತೆ!

7

ಹುಲಿಗಳ ಸಂಖ್ಯೆ ಮೂರರಷ್ಟಾಗುವ ಸಾಧ್ಯತೆ!

Published:
Updated:
Deccan Herald

ನವದೆಹಲಿ: ಏಷ್ಯಾದಲ್ಲಿನ 18 ‘ಹುಲಿ ಪುನಶ್ಚೇತನ ಕ್ಷೇತ್ರ’ಗಳು, ಈಗ ಅಲ್ಲಿರುವ ಹುಲಿಗಳಿಗಿಂತ ಇನ್ನೂ ಮೂರರಷ್ಟು ಹುಲಿಗಳನ್ನು ಪೋಷಿಸುವ ಸಾಮರ್ಥ್ಯ ಹೊಂದಿವೆ. ಈ ಕ್ಷೇತ್ರಗಳಲ್ಲಿ ಮುಂದಿನ 20 ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಮೂರರಷ್ಟಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಭಾರತವೂ ಸೇರಿದಂತೆ ಏಷ್ಯಾದ 10 ರಾಷ್ಟ್ರಗಳಲ್ಲಿ ಈ ಹುಲಿ ಪುಶ್ಚೇತನ ಕ್ಷೇತ್ರಗಳು ಹರಡಿಕೊಂಡಿವೆ. ವಿಶ್ವ ವನ್ಯಜೀವಿ ಮಂಡಳಿಯ ಜಾಗತಿಕ ಹುಲಿ ಸಂರಕ್ಷಣಾ ಕಾರ್ಯಕ್ರಮದ ಅಡಿ ಹುಲಿಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಲು ಈ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿತ್ತು.

ಈ ಕ್ಷೇತ್ರಗಳಲ್ಲಿ ಈಗ ಇರುವ ಹುಲಿಗಳ ಸಂಖ್ಯೆ, ಬಲಿ ಪ್ರಾಣಿಗಳ ಲಭ್ಯತೆ ಮತ್ತು ಬೇಟೆ ತಡೆ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿ ಅವುಗಳ ಸಾಮರ್ಥ್ಯವನ್ನು ಅಂದಾಜು ಮಾಡಲಾಗಿದೆ. 10 ರಾಷ್ಟ್ರಗಳ 49 ಪರಿಣಿತರು ಈ ಅಧ್ಯಯನ ತಂಡದಲ್ಲಿದ್ದರು.

18 ಪುನಶ್ಚೇತನ ಕ್ಷೇತ್ರಗಳಲ್ಲಿ ಎಲ್ಲವೂ ಪರಸ್ಪರ ಭಿನ್ನವಾಗಿವೆ. ಪ್ರತಿಯೊಂದು ಕ್ಷೇತ್ರದ ಭೌಗೋಳಿಕತೆ, ಬಲಿ ಪ್ರಾಣಿಗಳ ಲಭ್ಯತೆ ಮತ್ತು ಜೀವವೈವಿದ್ಯವು ಭಿನ್ನವಾಗಿವೆ. ಹೀಗಾಗಿ ಪ್ರತಿ ಕ್ಷೇತ್ರಕ್ಕೂ ಪ್ರತ್ಯೇಕವಾದ ಪುನಶ್ಚೇತನ ಯೋಜನೆಯನ್ನು ರೂಪಿಸಬೇಕಾಗುತ್ತದೆ ಎಂದು ಅಧ್ಯಯನ ತಂಡವು ಹೇಳಿದೆ.

Tags: 

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !