ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

200 ಕಿ.ಮೀ. ಸಂಚರಿಸಿದ ಹುಲಿ!

Last Updated 1 ನವೆಂಬರ್ 2019, 19:35 IST
ಅಕ್ಷರ ಗಾತ್ರ

ಔರಂಗಾಬಾದ್‌ : ಮಹಾರಾಷ್ಟ್ರದ ಯವತ್‌ಮಾಳ ಜಿಲ್ಲೆಯ ತಿಪ್ಪೇಶ್ವರ ವನ್ಯಜೀವಿ ಅಭಯಾರಣ್ಯದಲ್ಲಿದ್ದ ಹುಲಿಯೊಂದು 200 ಕಿ.ಮೀ. ಸಂಚರಿಸಿದ್ದು, ಮರಾಠಾವಾಡ ಪ್ರದೇಶದ ಉತ್ತರ ಭಾಗದ ಹಿಂಗೋಲಿಯಲ್ಲಿ ಕಾಣಿಸಿಕೊಂಡಿದೆ.

‘ಈ ಭಾಗದಲ್ಲಿ ನಾಲ್ಕು ದನಗಳನ್ನು ಕೊಂದಿರುವ ಈ ಹುಲಿ, ಕೃಷಿ ಚಟುವಟಿಕೆ ನಡೆಯುತ್ತಿರುವ ಪ್ರದೇಶದಲ್ಲಿ ಚಲನವಲನ ಪತ್ತೆಯಾಗಿದೆ. ಹುಲಿಗೆ ರೇಡಿಯೋ ಕಾಲರ್‌ ಅಳವಡಿಸಲಾಗಿದ್ದು, ಭಾರತೀಯ ವನ್ಯಜೀವಿ ಸಂಸ್ಥೆ(ಡಬ್ಲ್ಯೂಐಐ)ತಂಡ ಹುಲಿ ಚಲನವಲನದ ಮೇಲೆ ನಿಗಾ ಇರಿಸಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ತಿಳಿಸಿದರು.

‘ಹುಲಿ ಇರುವ ಪ್ರದೇಶದ ಬಗ್ಗೆ ಮಾಹಿತಿ ಪ್ರತಿ 12 ಗಂಟೆಗೊಮ್ಮೆ ದೊರೆಯುತ್ತಿದೆ. ಖಂಡಾಲಾ ಮತ್ತು ಕಲ್‌ಗಾಂವ್‌ನಲ್ಲಿ ‘ಟ್ರ್ಯಾಪ್‌ ಕ್ಯಾಮೆರಾ’ ಅಳವಡಿಸಲಾಗಿದ್ದು, ತಪ್ಪಿಸಿಕೊಂಡ ಹುಲಿಯ ಪತ್ತೆ ಕಾರ್ಯ ಪ್ರಗತಿಯಲ್ಲಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿ ಕೇಶವ್‌ ವಾಬ್ಲೆ ತಿಳಿಸಿದ್ದಾರೆ. ‘ಹುಲಿ ನರಭಕ್ಷಕವಲ್ಲ. ಆದರೆ, ಆತಂಕಗೊಂಡರೆ ಮನುಷ್ಯರ ಮೇಲೆ ದಾಳಿ ನಡೆಸಬಹುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT