ಹುಲಿ ಸಂತತಿ: ಕರ್ನಾಟಕವನ್ನು ಹಿಂದಿಕ್ಕಲಿದೆಯೇ ಮಧ್ಯಪ್ರದೇಶ?

7

ಹುಲಿ ಸಂತತಿ: ಕರ್ನಾಟಕವನ್ನು ಹಿಂದಿಕ್ಕಲಿದೆಯೇ ಮಧ್ಯಪ್ರದೇಶ?

Published:
Updated:

ಭೋಪಾಲ್‌: ಮಧ್ಯಪ್ರದೇಶದ ಅರಣ್ಯಗಳಲ್ಲಿ ಹುಲಿಗಳ ಆವಾಸ ಸ್ಥಾನಗಳ ವಿಸ್ತರಣೆಯಾಗಿದೆ. ಹಾಗಾಗಿ ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿರಬಹುದು ಎಂಬ ಭರವಸೆ ಮೂಡಿದೆ ಎಂದು ಅಲ್ಲಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಬಾಜ್‌ ಅಹ್ಮದ್‌ ಹೇಳಿದ್ದಾರೆ.

ಮಧ್ಯಪ್ರದೇಶ ಅರಣ್ಯ ಸಂಶೋಧನಾ ಸಂಸ್ಥೆಯು (ಎಸ್‌ಎಫ್‌ಆರ್‌ಐ) ಸಂಗ್ರಹಿಸಿದ ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು ಅವರು ಈ ಮಾಹಿತಿ ನೀಡಿದ್ದಾರೆ.

2014ರ ಹುಲಿ ಗಣತಿ ಸಂದರ್ಭದಲ್ಲಿ ಅರಣ್ಯದಲ್ಲಿ ಅಳವಡಿಸಲಾದ ಕ್ಯಾಮೆರಾಗಳಲ್ಲಿ ಮಧ್ಯಪ್ರದೇಶದಲ್ಲಿಯೇ ಹೆಚ್ಚು ಹುಲಿಗಳು ಪತ್ತೆಯಾಗಿದ್ದವು. ಮಧ್ಯಪ್ರದೇಶದ ಕಾಡುಗಳಲ್ಲಿ 286 ಹುಲಿಗಳನ್ನು ಗುರುತಿಸಲಾಗಿತ್ತು. ಕರ್ನಾಟಕ ಮತ್ತು ಉತ್ತರಾಖಂಡಗಳಲ್ಲಿ ಕ್ರಮವಾಗಿ 260 ಮತ್ತು 276 ಹುಲಿಗಳು ಪತ್ತೆಯಾಗಿದ್ದವು ಎಂದು ಅಹ್ಮದ್‌ ತಿಳಿಸಿದ್ದಾರೆ. 

ಹುಲಿಗಳು ಇರುವ ಅರಣ್ಯದ ಅಂಚಿನ ಪ್ರದೇಶಗಳಲ್ಲಿ ಜಾನುವಾರುಗಳನ್ನು ವನ್ಯಮೃಗಗಳು ಕೊಂದಿರುವ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಇದು ಕೂಡ ಮಧ್ಯಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿರಬಹುದು ಎಂಬ ಅಂದಾಜಿಗೆ ಕಾರಣವಾಗಿದೆ. 2009–10ರಲ್ಲಿ ಒಂದು ಸಾವಿರ ಜಾನುವಾರುಗಳನ್ನು ಕೊಲ್ಲಲಾಗಿತ್ತು. 2017–18ರಲ್ಲಿ ಈ ಸಂಖ್ಯೆ ಮೂರು ಸಾವಿರಕ್ಕೆ ಏರಿಕೆಯಾಗಿದೆ. 

ಇದರ ಜತೆಗೆ, ಹುಲಿ ಸಂಖ್ಯೆಗೆ ಸಂಬಂಧಿಸಿ ಮಧ್ಯಪ್ರದೇಶಕ್ಕೆ ಒಂದು ಕೆಟ್ಟ ಸುದ್ದಿಯೂ ಇದೆ. 2017ರಲ್ಲಿ ರಾಜ್ಯದ ಅರಣ್ಯಗಳಲ್ಲಿ 26 ಹುಲಿಗಳು ಸತ್ತಿವೆ. 2016ರಲ್ಲಿ ಈ ಸಂಖ್ಯೆ 33 ಆಗಿತ್ತು. 

ಆರು ಪ್ರಮುಖ ಹುಲಿ ಮೀಸಲು ಅರಣ್ಯಗಳು

ಬಾಂಧವ್‌ಗಡ, ಪೆಂಚ್‌, ಕಾನ್‌ಹ, ಪನ್ನಾ, ಸತ್ಪುಡ, ಸಂಜಯ್‌

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !