ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಸ್‌ ಡಿಜಿಟಲ್‌: ಸಂಶೋಧನಾ ಕೇಂದ್ರ ಆರಂಭ

Last Updated 13 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಡಿಜಿಟಲ್‌ ಬದಲಾವಣೆಯ ತಂತ್ರಜ್ಞಾನ ಮತ್ತು ಗ್ರಾಹಕರ ಅಗತ್ಯಗಳಿಗೆ ಪೂರಕವಾದ ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ ಸೇವೆಗಳನ್ನು ಒದಗಿಸುವ ನೆಸ್‌ ಡಿಜಿಟಲ್‌ ಎಂಜಿನಿಯರಿಂಗ್, ಹೈದರಾಬಾದ್‌ನಲ್ಲಿ ಹೊಸ ಸಂಶೋಧನಾ (ಓರಾಯನ್‌) ಕೇಂದ್ರ ಆರಂಭಿಸಿದೆ.

ಎಸ್‌ಆ್ಯಂಡ್‌ಪಿ ಗ್ಲೋಬಲ್‌ನ ಸಹಯೋಗದಲ್ಲಿ ಈ ಕೇಂದ್ರ ಆರಂಭಿಸಲಾಗಿದೆ. ಈ ಪ್ರದೇಶದಲ್ಲಿನ ತಂತ್ರಜ್ಞಾನ, ದತ್ತಾಂಶ ನಿರ್ವಹಣೆ ಮತ್ತು ಪ್ರಮುಖ ಸೇವೆಗಳನ್ನು ನಿರ್ವಹಿಸುತ್ತಿರುವ ಪ್ರತಿಭಾನ್ವಿತ ತಂತ್ರಜ್ಞರಿಗೆ ನೆರವಾಗುತ್ತಿರುವ ಸಂಸ್ಥೆಯ ಶ್ರೇಷ್ಠತಾ ಕೇಂದ್ರಕ್ಕೆ ಈ ಹೊಸ ಕೇಂದ್ರವು ಪೂರಕವಾಗಿ ಕೆಲಸ ಮಾಡಲಿದೆ. ಈ ಹೊಸ ಸಂಶೋಧನಾ ಕೇಂದ್ರವು  ಪ್ರತಿಭಾನ್ವಿತರಿಗೆ ಜಾಗತಿಕ ಗುಣಮಟ್ಟದ ಕೆಲಸದ ಪರಿಸರ ಒದಗಿಸಲಿದೆ. ‘ಎಸ್‌ಆ್ಯಂಡ್‌ಪಿ’ನ ವೈವಿಧ್ಯಮಯ ವಹಿವಾಟಿನ ಜಾಗತಿಕ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಇದು ನೆರವಾಗಲಿದೆ.

ಈ ಓರಾಯನ್‌ ಕೇಂದ್ರದಲ್ಲಿ 850ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡಬಹುದಾಗಿದೆ. ಈ ತಂತ್ರಜ್ಞರು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಸಂವಹನ ಮೂಲ ಸೌಕರ್ಯಗಳ ನೆರವಿನಿಂದ ಇತರ ತಂಡಗಳ ಜೊತೆಗೆ ಸಮನ್ವಯತೆಯಿಂದ ದಕ್ಷ ರೀತಿಯಲ್ಲಿ ಕೆಲಸ ಮಾಡಲು ಇಲ್ಲಿ ಪೂರಕ ವಾತಾವರಣ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT