ಚಂದ್ರಾಪುರ: ಹೆಣ್ಣು ಹುಲಿ, ಎರಡು ಮರಿಗಳ ಕಳೇಬರ ಪತ್ತೆ

ಶುಕ್ರವಾರ, ಜೂಲೈ 19, 2019
26 °C

ಚಂದ್ರಾಪುರ: ಹೆಣ್ಣು ಹುಲಿ, ಎರಡು ಮರಿಗಳ ಕಳೇಬರ ಪತ್ತೆ

Published:
Updated:

ಚಂದ್ರಾಪುರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಚಿಮೂರ್‌ ಅರಣ್ಯ ಪ್ರದೇಶ ವ್ಯಾಪ್ತಿಯ ಗ್ರಾಮವೊಂದರಲ್ಲಿ ಹೆಣ್ಣು ಹುಲಿ ಹಾಗೂ ಎರಡು ಮರಿಗಳ ಮೃತದೇಹ ಸೋಮವಾರ ಪತ್ತೆಯಾಗಿದೆ. ವಿಷ ಸೇವನೆಯಿಂದ ಈ ಹುಲಿಗಳು ಸತ್ತಿರಬಹುದು ಎಂದು ಶಂಕಿಸಲಾಗಿದೆ.

ಹುಲಿಗಳ ಮೃತದೇಹ ಚರಂಡಿಯೊಂದರ ಪಕ್ಕದಲ್ಲಿ ಪತ್ತೆಯಾಗಿದ್ದು, ಇವುಗಳ ಸಾವಿನ ಕಾರಣ ಪತ್ತೆಹಚ್ಚಲು ತನಿಖೆಗೆ ಆದೇಶಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಡೋಬಾ ಅಂಧಾರಿ ಹುಲಿ ಸಂರಕ್ಷಿತಾರಣ್ಯವು ಮುಂಬೈಯಿಂದ 680 ಕಿ.ಮೀ. ದೂರದಲ್ಲಿರುವ ಚಂದ್ರಾಪುರ ಜಿಲ್ಲೆಯಲ್ಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !