ಬುಧವಾರ, ಏಪ್ರಿಲ್ 8, 2020
19 °C

ಟಿಕ್‌‌ ಟಾಕ್ ಮೇಲಿನ ನಿಷೇಧ ತೆರವುಗೊಳಿಸಿದ ಮದ್ರಾಸ್ ಹೈಕೋರ್ಟ್

Agencies Updated:

ಅಕ್ಷರ ಗಾತ್ರ : | |

Prajavani

ಮದ್ರಾಸ್: ಮದ್ರಾಸ್ ಹೈಕೋರ್ಟ್ ಬುಧವಾರ ಟಿಕ್‌‌ಟಾಕ್ ಆಪ್ ಮೇಲಿನ ನಿಷೇಧವನ್ನು ತೆರವುಗೊಳಿಸಿದೆ.

ಕೆಲದಿನಗಳ ಹಿಂದೆ ಟಿಕ್‌‌ಟಾಕ್ ಆಪ್‌ ಮೇಲೆ ಸುಪ್ರೀಂಕೋರ್ಟ್ ನಿಷೇಧ ಹೇರಿತ್ತು. ಸುಪ್ರೀಂಕೋರ್ಟ್‌‌ನ ಆದೇಶದಿಂದಾಗಿ ಗೂಗಲ್ ಹಾಗೂ ಆಪಲ್ ಸಂಸ್ಥೆಗಳು ಟಿಕ್ಟಾಕ್ ಆಪ್ ಅನ್ನೇ ತೆಗೆದುಹಾಕಿದ್ದವು. ನಿಷೇಧದ ಕುರಿತು ಮದ್ರಾಸ್ ಹೈಕೋರ್ಟ್‌‌ನಲ್ಲಿ ಬುಧವಾರ ವಿಚಾರಣೆ ನಿಗದಿಯಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ನಿಷೇಧವನ್ನು ತೆರವುಗೊಳಿಸಿರುವುದಾಗಿ ತಿಳಿದುಬಂದಿದೆ.

ಹಿಂದೂಸ್ಥಾನ್ ಟೈಮ್ಸ್ ವೆಬ್‌‌ಸೈಟ್, ಈ ಸಂಬಂಧ ಸುದ್ದಿಯೊಂದನ್ನು ಪ್ರಕಟಿಸಿದ್ದು, ಅತಿಶೀಘ್ರದಲ್ಲಿಯೇ ಟಿಕ್ಟಾಕ್ ಮೊದಲಿನಂತೆ ಡೌನ್ ಲೋಡ್ ಮಾಡಬಹುದು. ಆದರೆ, ಯಾವ ದಿನದಿಂದ ಡೌನ್ ಲೋಡ್ ಮಾಡಿಕೊಳ್ಳಬುಹುದು ಎಂಬುದನ್ನು ತಿಳಿಸಿಲ್ಲ ಎಂದಿದೆ. 

 ಅಶ್ಲೀಲತೆಯನ್ನು ಉತ್ತೇಜಿಸುವ ಈ ಆಪ್ ಅನ್ನು ನಿಷೇಧಿಸಬೇಕು ಎಂದು ಈ ತಿಂಗಳ ಆರಂಭದಲ್ಲಿ ಮದ್ರಾಸ್ ಹೈಕೋರ್ಟ್ ಕೇಂದ್ರಸರ್ಕಾರಕ್ಕೆ ತಿಳಿಸಿತ್ತು. ನಂತರ ನಡೆದ ಬೆಳವಣಿಗೆಗಳಲ್ಲಿ ಸುಪ್ರೀಂಕೋರ್ಟ್ ಗೂಗಲ್ ಮತ್ತು ಆಪಲ್ ಫೋನ್ ಸಂಸ್ಥೆಗಳಿಗೆ ನೀಡಿ ಇನ್ನು ಮುಂದೆ ಡೌನ್ ಲೋಡ್ ಆಗದಂತೆ ಈ ಆಪ್ ಅನ್ನೇ ತೆಗೆದುಹಾಕಲು ಸೂಚಿಸಿತ್ತು. ಇದರಿಂದಾಗಿ ಡೌನ್ ಲೋಡ್ ಮಾಡಿಕೊಳ್ಳಲು ಆಪ್ ಸಿಗದಿದ್ದರೂ ಭಾರತದಲ್ಲಿ ಸುಪ್ರೀಂ ಕೋರ್ಟ್ ಸೂಚನೆ ನೀಡುವ ದಿನಕ್ಕಿಂತ ಮುಂಚೆಯೇ ಡೌನ್ ಲೋಡ್ ಮಾಡಿದ್ದ ಮೊಬೈಲ್ ಬಳಕೆದಾರರು ಇನ್ನೂ ಉಪಯೋಗಿಸುತ್ತಲೇ ಇದ್ದಾರೆ. ಆದರೆ, ಹೊಸದಾಗಿ ಈ ಆಪ್ ಡೌನ್ ಲೋಡ್ ಮಾಡಲು ಸಾಧ್ಯವಿರಲಿಲ್ಲ. 

ಕೆಲ ತಿಂಗಳ ಹಿಂದಷ್ಟೇ ಸಿದ್ಧಪಡಿಸಿದ್ದ ಟಿಕ್ ಟಾಕ್ ಆಪ್ ಪ್ರಪಂಚದಾದ್ಯಂತ ಬಹುಬೇಗ ಜನಪ್ರಿಯಗೊಂಡ ಆಪ್ ಆಗಿದೆ. ಭಾರತದಲ್ಲಿಯೇ ಒಂದುಮಿಲಿಯನ್ ಜನರು ಈ ಆಪ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಒಂದು ಮಾಹಿತಿಯ ಪ್ರಕಾರ, ಆರಂಭದ ಮೊದಲ ಮೂರು ತಿಂಗಳಲ್ಲಿ ವಿಶ್ವದಲ್ಲಿ 188 ಮಿನಿಯನ್ ಬಳಕೆದಾರರಿದ್ದರು. ಇವರಲ್ಲಿ 88.6 ಮಿಲಿಯನ್ ಜನರು ಭಾರತದಲ್ಲಿಯೇ ಇದ್ದಾರೆ ಎಂದು ಅಂದಾಜಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು