ಟಿಕ್‌ ಟಾಕ್‌ ಸೆಲೆಬ್ರಿಟಿ ಮೋಹಿತ್‌ ಮೋರ್‌ ಹತ್ಯೆ

ಮಂಗಳವಾರ, ಜೂನ್ 25, 2019
24 °C

ಟಿಕ್‌ ಟಾಕ್‌ ಸೆಲೆಬ್ರಿಟಿ ಮೋಹಿತ್‌ ಮೋರ್‌ ಹತ್ಯೆ

Published:
Updated:

ನವದೆಹಲಿ: ಟಿಕ್‌ ಟಾಕ್‌ ಆ್ಯಪ್‌ ಸೆಲೆಬ್ರಿಟಿ ಹಾಗೂ ಜಿಮ್‌ ತರಬೇತುದಾರ ಮೋಹಿತ್‌ ಮೋರ್‌ನನ್ನು ಮೂವರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 

ಮಂಗಳವಾರ ಸಂಜೆ ನಜಾಫ್‌ಗಡ ನಗರದಲ್ಲಿರುವ ಶಾಪ್‌ವೊಂದರಲ್ಲಿ ಹತ್ಯೆ ಮಾಡಲಾಗಿದೆ. 

ಮೋಹಿತ್‌ ಮೊರ್ ಟಿಕ್‌ ಟಾಕ್‌ ಆ್ಯಪ್‌ನಲ್ಲಿ 5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಫಿಟ್‌ನೆಸ್‌ಗೆ ಸಂಬಂಧಿಸಿದ ಅವರ ವಿಡಿಯೊಗಳು ಸಾಕಷ್ಟು ಜನಪ್ರಿಯವಾಗಿದ್ದವು. ಇನ್‌ಸ್ಟಾಗ್ರಾಂನಲ್ಲೂ ಮೋಹಿತ್ ಮೋರ್‌ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು. 

ಶಾಪ್‌ನಲ್ಲಿ ಸೋಫಾದ ಮೇಲೆ ಕುಳಿತಿರುವಾಗ ಏಕಾಏಕಿ ಒಳ ಬಂದ ದುಷ್ಕರ್ಮಿಗಳು 5 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಮೂವರು ಆರೋಪಿಗಳ ಪೈಕಿ ಇಬ್ಬರು ಹೆಲ್ಮೆಟ್‌ ಧರಿಸಿದ್ದರು. ಒಬ್ಬ ಆರೋಪಿ ಹೆಲ್ಮೆಟ್‌ ಹಾಕಿರಲಿಲ್ಲವಾದ್ದರಿಂದ ಸಿಸಿ ಕ್ಯಾಮೆರಾದಲ್ಲಿ ಗುರುತು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೋಹಿತ್ ಮೋರ್‌ ದೇಹದಲ್ಲಿ 13 ಗುಂಡುಗಳು ಹೊಕ್ಕಿದ್ದರಿಂದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಕೆಲವು ದಿನಗಳ ಹಿಂದೆ ಟಿಕ್‌ ಟಾಕ್‌ ಆ್ಯಪ್‌ ಅಶ್ಲೀಲತೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿ ಸುಪ್ರೀಂ ಕೋರ್ಟ್‌ ಈ ಆ್ಯಪ್ ಮೇಲೆ ನಿಷೇಧ ಹೇರಿತ್ತು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 2

  Sad
 • 1

  Frustrated
 • 12

  Angry

Comments:

0 comments

Write the first review for this !