ಬಿಜೆಪಿ ಸದಸ್ಯತ್ವ ನೋಂದಣಿ ಚೀಟಿಯಲ್ಲಿ ಮಮತಾ ಫೋಟೊ: ಬಿಜೆಪಿ ಕುತಂತ್ರ ಎಂದ ಟಿಎಂಸಿ

ಶುಕ್ರವಾರ, ಜೂಲೈ 19, 2019
26 °C

ಬಿಜೆಪಿ ಸದಸ್ಯತ್ವ ನೋಂದಣಿ ಚೀಟಿಯಲ್ಲಿ ಮಮತಾ ಫೋಟೊ: ಬಿಜೆಪಿ ಕುತಂತ್ರ ಎಂದ ಟಿಎಂಸಿ

Published:
Updated:

ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಫೋಟೊ ಹಾಕಿ ಬಿಜೆಪಿಯ ನಕಲಿ ಸದಸ್ಯತ್ವ ನೋಂದಣಿ ಚೀಟಿ ಸೃಷ್ಟಿಸಿದ್ದರ ವಿರುದ್ಧ ತೃಣಮೂಲ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಚಾಟಿ ಬೀಸಿರುವ ಪಶ್ಚಿಮ ಬಂಗಾಳ ಶಿಕ್ಷಣ ಸಚಿವ ಪಾರ್ಥಚಟರ್ಜಿ, ‘ಮಮತಾ ಬ್ಯಾನರ್ಜಿ ಅವರ ಹೆಸರಿಗೆ ಮಸಿ ಬಳಿಯಬೇಕೆಂದೇ ಬಿಜೆಪಿ ಈ ಕೆಲಸವನ್ನು ಮಾಡಿದೆ. ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ, ಸೈಬರ್‌ ಕ್ರೈಂ ಕಾನೂನಿನ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುವುದು’ ಎಂದು ಹೇಳಿದರು.

ಶ್ಯಾಮಪ್ರಸಾದ್‌ ಮುಖರ್ಜಿ ಅವರ ಜನ್ಮದಿನೋತ್ಸವದಂದು ಬಿಜೆಪಿ ದೇಶದೆಲ್ಲೆಡೆ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಿತ್ತು. ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದರೆ, ಗೃಹಸಚಿವ ಅಮಿತ್‌ ಶಾ ತೆಲಂಗಾಣದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದ್ದರು.  

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !