ಪಶ್ಚಿಮ ಬಂಗಾಳ: ಬಿಜೆಪಿ ಸೇರಿದ ಅರ್ಜುನ್ ಸಿಂಗ್, ಮಮತಾಗೆ ಶಾಕ್

ಶನಿವಾರ, ಮಾರ್ಚ್ 23, 2019
31 °C

ಪಶ್ಚಿಮ ಬಂಗಾಳ: ಬಿಜೆಪಿ ಸೇರಿದ ಅರ್ಜುನ್ ಸಿಂಗ್, ಮಮತಾಗೆ ಶಾಕ್

Published:
Updated:

ನವದೆಹಲಿ: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಧುರೀಣರ ಪಕ್ಷಾಂತರ ಪರ್ವ ಅಧಿಕೃತವಾಗಿ ಶುರುವಾಗಿದೆ. 

ಪಶ್ಚಿಮ ಬಂಗಾಳದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆರಿಸಿ ಬಂದಿರುವ ಅರ್ಜುನ್ ಸಿಂಗ್ ಅವರು ತೃಣಮೂಲ ಕಾಂಗ್ರೆಸ್‌ಗೆ (ಟಿಎಂಸಿ) ಗುರುವಾರ ವಿದಾಯ ಹೇಳಿದ್ದಾರೆ. ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಪಕ್ಷಕ್ಕೆ ತೀವ್ರ ಏಟು ನೀಡಿದ್ದಾರೆ. 

ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಹಾಗೂ ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಮುಕುಲ್ ರಾಯ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಕೇರಳ ಕಾಂಗ್ರೆಸ್ ನಾಯಕ ಟಾಮ್ ವಡಕ್ಕನ್ ಬಿಜೆಪಿಗೆ​

ಟಿಎಂಸಿ ಪ್ರಬಲ ನಾಯಕ ದಿನೇಶ್ ತ್ರಿವೇದಿ ವಿರುದ್ಧ ಅರ್ಜುನ್ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. ಮಮತಾ ಅವರು ತಮಗೆ ಟಿಕೆಟ್ ನೀಡಿಲಿಲ್ಲ ಎಂಬ ಕಾರಣಕ್ಕೆ ಅರ್ಜುನ್ ತೀವ್ರ ಅಸಮಾಧಾನಗೊಂಡಿದ್ದರು. 

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅರ್ಜುನ್ ಸಿಂಗ್, ‘ಪುಲ್ವಾಮಾ ದಾಳಿಯ ಕುರಿತು ಮಮತಾ ಬ್ಯಾನರ್ಜಿ ನೀಡಿದ ಹೇಳಿಕೆಗಳು ತಮಗೆ ಅಚ್ಚರಿ ಮೂಡಿಸಿದವು’ ಎಂದಿದ್ದಾರೆ.

‘ವಾಯುಪಡೆ ದಾಳಿ ನಡೆಸಿದಾಗ ಮಮತಾ ಅವರು ಉಗ್ರರ ಹೆಣಗಳ ಸಂಖ್ಯೆ ಕೇಳಿದರು. ಒಬ್ಬ ನಾಯಕಿಗೆ ರಾಷ್ಟ್ರೀಯ ಹಿತಾಸಕ್ತಿ ಇಲ್ಲ ಎಂದಾದರೆ ಅವರು ಮತದಾರರಿಗೆ ಒಳ್ಳೆಯದನ್ನು ಮಾಡಲು ಹೇಗೆ ಸಾಧ್ಯ? ಎಂದು ಸಿಂಗ್ ಪ್ರಶ್ನಿಸಿದ್ದಾರೆ.  

ಬರಹ ಇಷ್ಟವಾಯಿತೆ?

 • 24

  Happy
 • 2

  Amused
 • 1

  Sad
 • 0

  Frustrated
 • 7

  Angry

Comments:

0 comments

Write the first review for this !