ಶನಿವಾರ, ಜೂಲೈ 11, 2020
22 °C
ಆಂಧ್ರ ಪ್ರದೇಶ: ಆಕ್ರೋಶಗೊಂಡ ಪ್ರವಾಸೋದ್ಯಮ ಇಲಾಖೆ ವ್ಯವಸ್ಥಾಪಕ

ಮಾಸ್ಕ್‌ ಧರಿಸಲು ಹೇಳಿದ್ದಕ್ಕೆ ಮಹಿಳೆ ಮೇಲೆ ಅಧಿಕಾರಿಯಿಂದ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಮಾಸ್ಕ್‌ ಧರಿಸುವಂತೆ ತಿಳಿಸಿದ ಆಂಧ್ರಪ್ರದೇಶದ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯ ಅಂಗವಿಕಲ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಉಪ ವ್ಯವಸ್ಥಾಪಕ ಭಾಸ್ಕರ್‌ ಎಂಬುವರನ್ನು ಅಮಾನತುಗೊಳಿಸಲಾಗಿದ್ದು ನೆಲ್ಲೂರಿನಲ್ಲಿ ಬಂಧಿಸಲಾಗಿದೆ. 

ಹಲ್ಲೆ ಘಟನೆ ಜೂನ್‌ 27 ರಂದು ನಡೆದಿದೆ. ಆದರೆ, ಸಂತ್ರಸ್ತೆ ಜೂನ್ 29 ರಂದು ಉನ್ನತ ಅಧಿಕಾರಿಗಳು ಮತ್ತು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. 

‘ಕಚೇರಿಯಲ್ಲಿ ಮತ್ತು ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಮಾಸ್ಕ್‌ ಧರಿಸಿ’ ಎಂದು ಗುತ್ತಿಗೆ ಆಧಾರದ ಹಿರಿಯ ಸಹಾಯಕಿ ಉಷಾ ರಾಣಿ ತಿಳಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಧಿಕಾರಿ ಮಹಿಳೆ ಮೇಲೆ ಕೋಲು ಮತ್ತು ಕಬ್ಬಿಣದ ತುಂಡಿನಿಂದ ಹಲ್ಲೆ ನಡೆಸಿದ್ದಾರೆ. 

ಮಹಿಳೆಯನ್ನು ಬೆನ್ನಟ್ಟಿ, ನೆಲಕ್ಕೆ ಬೀಳಿಸಿ ಅಧಿಕಾರಿ ಹೊಡೆಯುತ್ತಿದ್ದು, ಅದನ್ನು ಸಹೋದ್ಯೋಗಿಗಳು ತಡೆಯಲು ಯತ್ನಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

‘ಮಾಸ್ಕ್‌ ಧರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.  ಆರೋಪಿಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪೊಲೀಸ್‌ ಇನ್‌ಸ್ಪೆಕ್ಟರ್‌ ಎಂ. ಎಂ.ನಾಗೇಶ್ವರಮ್ಮ ತಿಳಿಸಿದ್ದಾರೆ. 

‘ಮಹಿಳಾ ಉದ್ಯೋಗಿ ದೂರು ನೀಡಿದ ತಕ್ಷಣ ಭಾಸ್ಕರ್‌ ಅವರನ್ನು ಅಮಾನತುಗೊಳಿಸಲಾಗಿದೆ. ಪ್ರಕರಣ ಸಂಬಂಧ, ವಿಚಾರಣಾ ಸಮಿತಿ ರಚಿಸಲಾಗಿದೆ’ ಎಂದು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್‌ ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು