ಜಪಾನ್‌ನಲ್ಲಿ ದೇವತೆ ’ಲಕ್ಷ್ಮಿ’

7

ಜಪಾನ್‌ನಲ್ಲಿ ದೇವತೆ ’ಲಕ್ಷ್ಮಿ’

Published:
Updated:
Deccan Herald

ಬೆಂಗಳೂರು: ಜಪಾನ್‌ನ ಟೋಕಿಯೊ ಸಮೀಪದ ಪಟ್ಟಣಕ್ಕೆ ಹಿಂದೂ ದೇವತೆ ’ಲಕ್ಷ್ಮಿ’ ಹೆಸರನ್ನು ಇಡಲಾಗಿದೆ ಎಂದು ಜಪಾನ್‌ ರಾಯಭಾರಿ ಟಕಾಯುಕಿ ಕಿಟಗಾವಾ ಭಾನುವಾರ ಹೇಳಿದ್ದಾರೆ. 

’ಕಿಚಿಜೊಜಿ’ ಟೋಕಿಯೊ ಸಮೀಪವಿರುವ ಪಟ್ಟಣ. ಲಕ್ಷ್ಮಿ ದೇವಾಲಯವೇ ಈ ಊರಿನ ಹೆಸರಿನ ಮೂಲವಾಗಿದೆ. ಜಪಾನಿ ಭಾಷೆಯಲ್ಲಿ ಕಿಚಿಜೊಜಿ ಎಂದರೆ ಲಕ್ಷ್ಮಿ ದೇವಾಲಯವೆಂಬ ಅರ್ಥವಿದೆ ಎಂದು ಕಿಟಗಾವಾ ಅವರು ನಗರದ ದಯಾನಂದ ಸಾಗರ್ ಕಾಲೇಜಿನ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. 

ಭಾರತ ಮತ್ತು ಜಪಾನ್‌ ಸಾಂಸ್ಕೃತಿಕವಾಗಿ ಬಹಳ ಭಿನ್ನ ಎಂದು ಹಲವರು ನಂಬಿದ್ದಾರೆ. ಆದರೆ, ಜಪಾನಿನ ಸಂಸ್ಕೃತಿ ಮೇಲೆ ಭಾರತದ ಪ್ರಭಾವವಿದ್ದು, ಜಪಾನಿನಲ್ಲಿ ಹಿಂದೂ ದೇವತೆಗಳಿಗಾಗಿಯೇ ಹಲವು ದೇವಾಲಯಗಳಿವೆ. ಸೂರ್ಯೋದಯದ ನಾಡಿನಲ್ಲಿ ಅನೇಕ ಹಿಂದೂ ದೇವತೆಗಳನ್ನು ಅತ್ಯಂತ ಗೌರವದಿಂದ ಪೂಜಿಸಲಾಗುತ್ತಿದೆ ಎಂದಿದ್ದಾರೆ.  

ಸಂಸ್ಕೃತದ ಹಲವು ಶಬ್ದಗಳು ಜಪಾನಿ ಭಾಷೆಯಲ್ಲಿಯೂ ಬಳಕೆಯಲ್ಲಿವೆ. ಜಪಾನಿ ಅಡುಗೆ ’ಸೂಶಿ’ ಅನ್ನು ಅಕ್ಕಿ ಮತ್ತು ವಿನೇಗರ್‌ ಬಳಸಿ ಸಿದ್ಧಪಡಿಸಲಾಗುತ್ತದೆ. ’ಸೂಶಿ’ ಜತೆಗೆ ’ಶಾರಿ’ ಸೇರಿದ್ದು, ಸಂಸ್ಕೃತ ಪದ ’ಶಾಲಿ’ಯಿಂದ ಶಾರಿ ಬಂದಿದೆ. ’ಶಾಲಿ’ ಎಂದರೆ ’ಅಕ್ಕಿ’ ಎಂದು ಅರ್ಥ. ಜಪಾನಿ ಪಂಡಿತರ ಪ್ರಕಾರ, ಸುಮಾರು 500 ಜಪಾನಿ ಪದಗಳ ಮೂಲವನ್ನು ಸಂಸ್ಕೃತ ಮತ್ತು ತಮಿಳಿನಲ್ಲಿ ಗುರುತಿಸಬಹುದು. ಹಾಗಾಗಿ, ಭಾರತೀಯ ಸಂಸ್ಕೃತಿಯೊಂದಿಗೆ ಭಾರತದ ಭಾಷೆಗಳೂ ಸಹ ಜಪಾನ್‌ ಭಾಷೆ ಮತ್ತು ಪೂಜಿಸುವ ಸಂಸ್ಕಾರಗಳ ಮೇಲೆ ಪ್ರಭಾವಿಸಿವೆ ಎಂದು ವಿವರಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !