ಟ್ರಾಯ್ ಅಧ್ಯಕ್ಷ ಶರ್ಮಾ ಅಧಿಕಾರಾವಧಿ 2020ರವರೆಗೆ ವಿಸ್ತರಣೆ

7
ನಿವೃತ್ತಿಗೆ ಒಂದು ದಿನ ಮೊದಲು ಆದೇಶ

ಟ್ರಾಯ್ ಅಧ್ಯಕ್ಷ ಶರ್ಮಾ ಅಧಿಕಾರಾವಧಿ 2020ರವರೆಗೆ ವಿಸ್ತರಣೆ

Published:
Updated:
Deccan Herald

ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಧ್ಯಕ್ಷ ರಾಮ್ ಸೇವಕ್ ಶರ್ಮಾ ಅವರ ಅಧಿಕಾರಾವಧಿ ಎರಡು ವರ್ಷ ವಿಸ್ತರಣೆಯಾಗಿದೆ. ನಿವೃತ್ತರಾಗುವ ಒಂದು ದಿನ ಮೊದಲು ಈ ಆದೇಶ ಹೊರಬಿದ್ದಿದೆ. 

10 ಆಗಸ್ಟ್ 2018ರಿಂದ 30 ಸೆಪ್ಟೆಂಬರ್ 2020ರವರೆಗೆ ಅವರು ಟ್ರಾಯ್ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಸಿಬ್ಬಂದಿ ಸಚಿವಾಲಯ ತಿಳಿಸಿದೆ. 2015ರಲ್ಲಿ ದೂರಸಂಪರ್ಕ ಪ್ರಾಧಿಕಾರದ ಅಧ್ಯಕ್ಷರಾಗಿ ಇವರು ಅಧಿಕಾರ ವಹಿಸಿಕೊಂಡಿದ್ದರು.

ಇತ್ತೀಚೆಗೆ ತಮ್ಮ ಆಧಾರ್ ಸಂಖ್ಯೆಯನ್ನು ಟ್ವಿಟರ್‌ನಲ್ಲಿ ಪ್ರಕಟಿಸಿ, ಮಾಹಿತಿಯನ್ನು ಹ್ಯಾಕ್ ಮಾಡುವಂತೆ ಸವಾಲೆಸೆದು ವಿವಾದಕ್ಕೀಡಾಗಿದ್ದರು. 

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !