ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶೀ ನಿರ್ಮಿತ ವೇಗದ ರೈಲು ‘ಟ್ರೇನ್‌ 18’ ಇನ್ನು ಮುಂದೆ ವಂದೇ ಭಾರತ ಎಕ್ಸ್‌ಪ್ರೆಸ್

Last Updated 27 ಜನವರಿ 2019, 19:35 IST
ಅಕ್ಷರ ಗಾತ್ರ

ನವದೆಹಲಿ: ದೇಶಿ ತಂತ್ರಜ್ಞಾನದಲ್ಲಿ ನಿರ್ಮಿಸಿದ ಅತಿ ವೇಗದರೈಲಿಗೆ ‘ವಂದೇ ಭಾರತ ಎಕ್ಸ್‌ಪ್ರೆಸ್’ ಎಂದು ಹೆಸರಿಡಲಾಗಿದೆ ಎಂದುರೈಲ್ವೆ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ.

‘ಮೇಕ್ ಇನ್ ಇಂಡಿಯಾ ಅಡಿಯಲ್ಲಿ ವಿಶ್ವದರ್ಜೆ ರೈಲುಗಳನ್ನು ನಿರ್ಮಿಸಲು ಸಾಧ್ಯ ಎನ್ನುವುದಕ್ಕೆ ಈ ರೈಲು ಉದಾಹರಣೆ’ ಎಂದು ಗೋಯಲ್ ಹೇಳಿದ್ದಾರೆ.

ಈ ರೈಲು ನಿರ್ಮಾಣ ಆರಂಭಿಸಿದಾಗ ‘ಟ್ರೇನ್ 18’ ಎಂದು ಹೆಸರಿಡಲಾಗಿತ್ತು. ಬಳಿಕ ಇದಕ್ಕೆ ಹೆಸರಿಡಲು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಆದರೆ ಅಂತಿಮವಾಗಿ ಈ ‘ವಂದೇ ಭಾರತ ಎಕ್ಸ್‌ಪ್ರೆಸ್’ ಎಂದು ನಿಗದಿಪಡಿಸಲಾಯಿತು.ಇದು ಗಣರಾಜ್ಯೋತ್ಸವ ಸಂದರ್ಭದಲ್ಲಿ ಜನರಿಗೆ ನೀಡುತ್ತಿರುವ ಕೊಡುಗೆ ಎಂದುಅವರುಹೇಳಿದ್ದಾರೆ.

ದೆಹಲಿಯಿಂದ ವಾರಾಣಸಿಗೆ ಸಂಚರಿಸಲಿರುವ ಹೊಸ ಹೆಸರಿನ ರೈಲಿಗೆ ಪ್ರಧಾನಿ ಮೋದಿ ಶೀಘ್ರ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

16 ಬೋಗಿಗಳ ಈ ರೈಲನ್ನು ₹97 ಕೋಟಿ ವೆಚ್ಚದಲ್ಲಿ,18 ತಿಂಗಳಲ್ಲಿ ಸಿದ್ಧಪ‍ಡಿಸಲಾಗಿದೆ. ಸಂಪೂರ್ಣವಾಗಿ ಭಾರತೀಯ ಎಂಜಿನಿಯರ್‌ಗಳೇ ಇದನ್ನುನಿರ್ಮಿಸಿದ್ದಾರೆ.

ತಯಾರಿಕೆ ಹೆಚ್ಚಳಕ್ಕೆ ಮನವಿ

‘ತಯಾರಿಕೆ ಹೆಚ್ಚಿಸಲು ಹಾಗೂ ಈ ಮೂಲಕ ಒಟ್ಟು ವೆಚ್ಚ ಕಡಿಮೆ ಮಾಡಲುರೈಲ್ವೆ ಮಂಡಳಿಗೆ ಕೋರಿದ್ದೇನೆ. ಒಮ್ಮೆ ಹೆಚ್ಚುವರಿ ರೈಲುಗಳ ಉತ್ಪಾದನೆಯಾದ ಬಳಿಕ ಅವುಗಳನ್ನು ರಫ್ತು ಸಹ ಮಾಡಲಾಗುತ್ತದೆ’ ಎಂದು ಗೋಯಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT