ಶನಿವಾರ, ಜೂನ್ 19, 2021
28 °C
ಸಂಚರಿಸಲಿದೆ 'ಸಂಘಮಿತ್ರ'

ಜೂನ್‌ 1ರಿಂದ 'ಉದ್ಯಾನ್' ಸೇರಿ ಹಲವು ರೈಲುಗಳ ಸಂಚಾರ: ಬುಕಿಂಗ್ ಆರಂಭ

ಏಜನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ರೈಲ್ವೆ ಇಲಾಖೆಯು ಜೂನ್‌ 1ರಿಂದ ಸಂಚರಿಸುವ ರೈಲುಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಇಂದು ಬೆಳಿಗ್ಗೆ 10ರಿಂದ ಆನ್‌ಲೈನ್‌ ಮೂಲಕ ಟಿಕೆಟ್‌ ಬುಕಿಂಗ್‌ (ನೋಂದಣಿ) ಮಾಡಬಹುದಾಗಿದೆ.

ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಅಥವಾ ಮೊಬೈಲ್ ಆ್ಯಪ್ ಮೂಲಕ ಇ-ಟಿಕೆಟ್‌ ನೋಂದಣಿ ಮಾಡಿಕೊಳ್ಳಬಹುದಾಗಿದ್ದು, ಯಾವುದೇ ರೈಲು ನಿಲ್ದಾಣದ ಕೌಂಟರ್‌ಗಳಲ್ಲಿ ಟಿಕೆಟ್‌ಗಳು ಲಭ್ಯವಿರುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.‌

ಗರಿಷ್ಠ 30 ದಿನಗಳ ವರೆಗೆ ಟಿಕೆಟ್‌ ಕಾಯ್ದಿರಿಸಬಹುದಾಗಿದೆ. ನೋಂದಣಿ ಮಾಡಿಕೊಂಡ ಟಿಕೆಟ್‌ ರದ್ದು ಪಡಿಸುವುದಕ್ಕೆ ಸಂಬಂಧಿಸಿದಂತೆ ನಿಯಮ ರೂಪಿಸಲಾಗುವುದು ಹಾಗೂ ವೆಯ್ಟಿಂಗ್‌ ಲಿಸ್ಟ್‌ ಟಿಕೆಟ್‌ ಇರುವವರು ಪ್ರಯಾಣಿಸಲು ಅವಕಾಶ ಇರುವುದಿಲ್ಲ ಎಂದೂ ಹೆಳಲಾಗಿದೆ.

ಎಲ್ಲವೂ ಕಾಯ್ದಿರಿಸಿದ ಟಿಕೆಟ್‌ಗಳೇ ಆಗಿರುತ್ತವೆ. ಸ್ಥಳದಲ್ಲಿ ಟಿಕೆಟ್‌ ನೀಡುವುದು ಅಥವಾ ತತ್ಕಾಲ್‌ ಬುಕಿಂಗ್‌ಗಳಿಗೆ ಅವಕಾಶ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಜೂನ್‌ 1ರಿಂದ ಸಂಚರಿಸಲಿರುವ 100 ರೈಲುಗಳ ಪಟ್ಟಿಯನ್ನು ರೈಲ್ವೆ ಇಲಾಖೆ ಬುಧವಾರ ಪ್ರಕಟಿಸಿತ್ತು. ಈ ರೈಲುಗಳಲ್ಲಿ ಎ.ಸಿ ಹಾಗೂ ಎ.ಸಿ ರಹಿತ ಕೋಚ್‌ಗಳು ಇರಲಿವೆ.

ರೈಲ್ವೆ ಪ್ರಯಾಣಿಕರಿಗೆ ಇ ಬುಕ್ಕಿಂಗ್ ಇಂದಿನಿಂದ

ಹುಬ್ಬಳ್ಳಿ ವರದಿ: ಜೂನ್ 1ರಿಂದ ವಿವಿಧೆಡೆ ಆರಂಭವಾಗುವ ರೈಲುಗಳಿಗೆ ಗುರುವಾರ (ಮೇ 21ರಿಂದ) ಬೆಳಿಗ್ಗೆ 10 ಗಂಟೆಯಿಂದ ಇ ಬುಕ್ಕಿಂಗ್ ಆರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಮುಂಬೈ-ಕೆಎಸ್ಆರ್ ಬೆಂಗಳೂರು ಉದ್ಯಾನ್ ಎಕ್ಸಪ್ರೆಸ್‌, ಮುಂಬೈ-ಗದಗ ಎಕ್ಸ್‌ಪ್ರೆಸ್‌, ದಾನಪುರ-ಕೆಎಸ್ಆರ್ ಬೆಂಗಳೂರು ಸಂಘಮಿತ್ರ ಎಕ್ಸ್‌ಪ್ರೆಸ್‌, ವಾರಕ್ಕೆ ಎರಡು ಬಾರಿ ಸಂಚರಿಸುವ ನವದೆಹಲಿ-ಯಶವಂತಪುರ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್, ಹುಬ್ಬಳ್ಳಿ-ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್, ಯಶವಂತಪುರ-ಶಿವಮೊಗ್ಗ ಜನಶತಾಬ್ದಿ ಎಕ್ಸ್‌ಪ್ರೆಸ್‌, ವಾಸ್ಕೋಡಗಾಮ-ಹಜರತ್ ನಿಜಾಮುದ್ದೀನ್ ಗೋವಾ ಎಕ್ಸ್‌ಪ್ರೆಸ್‌ ಮತ್ತು ಹೌರಾ- ಯಶವಂತಪುರ ಹೌರಾ ದುರಂತೊ ಎಕ್ಸ್‌ಪ್ರೆಸ್‌ ರೈಲುಗಳು ಜೂನ್ 1ರಿಂದ ಸಂಚರಿಸಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು