ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಆಯ್ದ ನಗರಗಳಿಗೆ ರೈಲು ಸೇವೆ

Last Updated 10 ಮೇ 2020, 19:26 IST
ಅಕ್ಷರ ಗಾತ್ರ

ನವದೆಹಲಿ: ಮೇ 12ರಿಂದ ಆಯ್ದ ನಗರಗಳಿಗೆ ರೈಲು ಸೇವೆಯನ್ನು ಆರಂಭಿಸುವುದಾಗಿ ಭಾರತೀಯ ರೈಲ್ವೆ ಭಾನುವಾರ ತಿಳಿಸಿದೆ.

ಮಂಗಳವಾರದಿಂದ 15 ಜೋಡಿ ರೈಲುಗಳನ್ನು ಆರಂಭಿಸಲಾಗುವುದು. ನವದೆಹಲಿಯಿಂದ ದಿಬ್ರುಗಡ, ಅಗರ್ತಲಾ, ಹೌರಾ, ಪಟ್ನಾ, ಬಿಲಾಸ್‌ಪುರ, ರಾಂಚಿ, ಭುವನೇಶ್ವರ, ಸಿಕಂದರಾಬಾದ್‌, ಬೆಂಗಳೂರು, ಚೆನ್ನೈ, ತಿರುವನಂತಪುರ, ಮಡಗಾಂವ್‌, ಮುಂಬೈ, ಅಹಮದಾಬಾದ್‌ ಹಾಗೂ ಜಮ್ಮುತಾವಿಗೆ ರೈಲು ಸಂಪರ್ಕ ಆರಂಭವಾಗಲಿದೆ.

ಸೋಮವಾರ ಸಂಜೆ 4 ಗಂಟೆಯ ನಂತರ ಐಆರ್‌ಸಿಟಿಸಿ (ವೆಬ್‌ಸೈಟ್‌: http://www.irctc.co.in/) ಮೂಲಕ ಮಾತ್ರ ಟಿಕೆಟ್‌ ಕಾಯ್ದಿರಿಸಲು ಅವಕಾಶ ಇರುತ್ತದೆ ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT