ಚುನಾವಣೋತ್ತರ ಮೈತ್ರಿಗೆ ಟಿಆರ್‌ಎಸ್‌–ಬಿಜೆಪಿ ಸಹಮತ

7
ದೆಹಲಿಯಲ್ಲಿ ಮೋದಿ ಭೇಟಿಯಾದ ತೆಲಂಗಾಣ ಸಿಎಂ ಕೆಸಿಆರ್‌

ಚುನಾವಣೋತ್ತರ ಮೈತ್ರಿಗೆ ಟಿಆರ್‌ಎಸ್‌–ಬಿಜೆಪಿ ಸಹಮತ

Published:
Updated:

ಹೈದರಾಬಾದ್‌: 2019ರ ಲೋಕಸಭಾ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಒಮ್ಮತದ ತೀರ್ಮಾನಕ್ಕೆ ಬಂದಿವೆ.

ತೆಲಂಗಾಣ ಮುಖ್ಯಮಂತ್ರಿ ಮತ್ತು ಟಿಆರ್‌ಎಸ್ ಪಕ್ಷದ ಮುಖ್ಯಸ್ಥ ಕೆ.ಚಂದ್ರಶೇಖರರಾವ್ ಈ ಸಂಬಂಧ ಶನಿವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಸುಧೀರ್ಘ ಮಾತುಕತೆ ನಡೆಸಿದ್ದಾರೆ.

‘ಮೋದಿ ಮತ್ತು ಚಂದ್ರಶೇಖರ್‌ ರಾವ್‌ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಜತೆ ಚುನಾವಣಾ ಪೂರ್ವ ಮೈತ್ರಿಯಿಂದ ಪಕ್ಷಕ್ಕೂ ಲಾಭವಿಲ್ಲ. ಸರ್ಕಾರ ರಚಿಸಲು ಸಂಖ್ಯಾಬಲ ಕೊರತೆಯಾದರೆ ಎನ್‌ಡಿಎ ಜತೆ ಕೈಜೋಡಿಸಲು ಪಕ್ಷ ಮುಕ್ತವಾಗಿರುವುದಾಗಿ ಪ್ರಧಾನಿಗೆ ರಾವ್‌ ತಿಳಿಸಿದ್ದಾರೆ’ ಎಂದು ಪಕ್ಷದ ಮೂಲಗಳು ಹೇಳಿವೆ.

ಇತ್ತೀಚೆಗಷ್ಟೇ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೆಲುಗು ದೇಶಂ ಪಕ್ಷ (ಟಿಡಿಪಿ) ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಮತದಾನ ಪ್ರಕ್ರಿಯೆಯಿಂದ ಟಿಆರ್‌ಎಸ್‌ ಅಂತರ ಕಾಯ್ದುಕೊಂಡಿತ್ತು. ಪರೋಕ್ಷವಾಗಿ ಮೋದಿ ಬೆಂಬಲಿಸಿತ್ತು. ಎನ್‌ಡಿಎ ಮೈತ್ರಿಕೂಟದದಿಂದ ಟಿಡಿಪಿ ಹೊರಬಂದ ಮೇಲೆ ಬಿಜೆಪಿ ಈಗ ಟಿಆರ್‌ಎಸ್‌ಗೆ ಹತ್ತಿರವಾಗುತ್ತಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !