ಪ್ರತಿಭಟನೆಗಳಿಗೆ ಹೆದರುವುದಿಲ್ಲ, ಶಬರಿಮಲೆ ಪ್ರವೇಶ ಶೀಘ್ರದಲ್ಲೇ: ತೃಪ್ತಿ ದೇಸಾಯಿ

7

ಪ್ರತಿಭಟನೆಗಳಿಗೆ ಹೆದರುವುದಿಲ್ಲ, ಶಬರಿಮಲೆ ಪ್ರವೇಶ ಶೀಘ್ರದಲ್ಲೇ: ತೃಪ್ತಿ ದೇಸಾಯಿ

Published:
Updated:

ಮುಂಬೈ: ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿರುವುದರಿಂದ ಶೀಘ್ರದಲ್ಲೇ ನಾವು ಶಬರಿಮಲೆ ಪ್ರವೇಶಿಸಲಿದ್ದೇವೆ ಎಂದು ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಹೇಳಿದ್ದಾರೆ. ಮಂಡಲ ಪೂಜೆಯ ಸಂಭ್ರಮದ ಕಾಲದಲ್ಲಿಯೇ ಶಬರಿಮಲೆ ಪ್ರವೇಶಿಸುತ್ತೇವೆ. ಪ್ರವೇಶಿಸುವ  ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಮಹಿಳೆಯರ ಗುಂಪಿನೊಂದಿಗೇ ನಾನು ದೇವಾಲಯ ಪ್ರವೇಶಿಸುತ್ತೇನೆ ಎಂದು ಮಾತೃಭೂಮಿ ನ್ಯೂಸ್ ವಾಹಿನಿ ಜತೆ ಮಾತನಾಡಿದ ತೃಪ್ತಿ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪು ಬಗ್ಗೆ ಕೇಳಿ ಖುಷಿಯಾಗಿದೆ. ಮಹಿಳೆಯರಿಗೆ ಅವರ ಹಕ್ಕು ಸಿಕ್ಕಿದೆ. ಅಯ್ಯಪ್ಪ ಸ್ವಾಮಿ ಭಕ್ತರ ಅಭಿಪ್ರಾಯ ಕೇಳಿದ  ನಂತರವೇ ನ್ಯಾಯಾಲಯ ಈ ತೀರ್ಪು ನೀಡಿದ್ದು, ಇದಾದ ನಂತರವೂ ಪ್ರತಿಭಟನೆ ನಡೆಸುವುದು ನ್ಯಾಯಾಲಯದ ತೀರ್ಪು ಕಡೆಗಣಿಸಿದಂತೆ. ಕೇರಳದಲ್ಲಿ ಈಗ ನಡೆಯುತ್ತಿರುವ ಪ್ರತಿಭಟನೆಗಳು ಅನಗತ್ಯ. ಇದು ಸಂವಿಧಾನದ ವಿರುದ್ಧ ಮತ್ತು ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಇಂಥಾ ಪ್ರತಿಭಟನೆಗಳು ಯಾಕೆ ಎಂಬುದನ್ನು ಕಾಂಗ್ರೆಸ್  ಮತ್ತು ಬಿಜೆಪಿ ಹೇಳಬೇಕು. ಶಬರಿಮಲೆಗೆ ಬರುವ ಮಹಿಳೆಯರನ್ನು ಎಲ್ಲರೂ ಸ್ವಾಗತಿಸಬೇಕು ಎಂದಿದ್ದಾರೆ ತೃಪ್ತಿ. 

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !