ಮಂಗಳವಾರ, ಸೆಪ್ಟೆಂಬರ್ 17, 2019
24 °C
ರೈಲ್ವೆ ಇಲಾಖೆ ಸಾಧನೆ: ಆಂಧ್ರದ ಚೆರ‍್ಲೋಪಲ್ಲಿ – ರಾಪುರ ನಡುವೆ ಸಂಪರ್ಕ

ಅತಿ ಉದ್ದದ ಸುರಂಗ ಮಾರ್ಗ

Published:
Updated:
Prajavani

ಗುಡೂರು (ಆಂಧ್ರಪ್ರದೇಶ): ದೇಶದ ಅತಿ ಉದ್ದನೇಯ ವಿದ್ಯುದೀಕರಣಗೊಂಡ ರೈಲಿನ ಸುರಂಗ ಮಾರ್ಗವನ್ನು ಭಾನುವಾರ ಲೋಕಾರ್ಪಣೆ ಮಾಡಲಾಯಿತು.

ಆಂಧ್ರಪ್ರದೇಶದ ಚೆರ‍್ಲೋಪಲ್ಲಿ ಮತ್ತು ರಾಪುರ ನಡುವಿನ ಈ ಮಾರ್ಗವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ದೇಶಕ್ಕೆ ಸಮರ್ಪಿಸಿದರು.

ಇದೇ ವೇಳೆ, ವಿದ್ಯುದೀಕರಣಗೊಂಡ ವೆಂಕಟಾಚಲಂ ಮತ್ತು ಒಬುಳವರಿಪಾಳ್ಳಿ ಮಾರ್ಗ ಹಾಗೂ ಗುಡೂರು ರೈಲ್ವೆ ನಿಲ್ದಾಣದ ಮರುವಿನ್ಯಾಸಗೊಂಡಿರುವ ಯಾರ್ಡ್‌ ಅನ್ನು ಅವರು ಉದ್ಘಾಟಿಸಿದರು.

112 ಕಿಲೋ ಮೀಟರ್‌ ಉದ್ದದ ಕೃಷ್ಣಪಟ್ಟಣ ಬಂದರು ಮತ್ತು ಒಬಳವರಿಪಳ್ಳಿ ನೂತನ ಮಾರ್ಗವನ್ನು ಅದಿರು ಮತ್ತು ಕೈಗಾರಿಕೆ ಉತ್ಪನ್ನಗಳನ್ನು ಸಾಗಿಸಲು ಅನುಕೂಲವಾಗುವಂತೆ ₹1993 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ರೈಲು ಮಾರ್ಗದ ಭಾಗವಾಗಿಯೇ 6.7 ಕಿಲೋ ಮೀಟರ್‌ ಮತ್ತು ಒಂದು ಕಿಲೋ ಮೀಟರ್‌ ಉದ್ದದ ಎರಡು ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿದೆ
ಎಂದು ದಕ್ಷಿಣ ಮಧ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಸುರಂಗ ವಿಶೇಷ

*ಉದ್ದ :  6.7 ಕಿ.ಮೀ

*ವೆಚ್ಚ: ₹437 ಕೋಟಿ

* ‘U’  ಆಕೃತಿಯ ವಿನ್ಯಾಸ

* ಕೃಷ್ಣಪಟ್ಟಣ ಬಂದರು ಸಂಪರ್ಕಿಸಲು ಅನುಕೂಲ

Post Comments (+)