ವಂದೇ ಭಾರತ್ ರೈಲಿನ ಮಿಂಚಿನ ವೇಗ: ಟ್ವಿಟರಿಗರ ಟೀಕೆ

7

ವಂದೇ ಭಾರತ್ ರೈಲಿನ ಮಿಂಚಿನ ವೇಗ: ಟ್ವಿಟರಿಗರ ಟೀಕೆ

Published:
Updated:
Prajavani

ನವದೆಹಲಿ: ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರು ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲಿನ (ಟ್ರೈನ್ 18) ತಿರುಚಿದ ವಿಡಿಯೊವನ್ನು ಹಂಚಿಕೊಂಡಿದ್ದಾರೆ ಎಂಬ ಕಾರಣಕ್ಕೆ ಟ್ವಿಟರಿಗರಿಂದ ಅವರು ಸೋಮವಾರ ಟ್ರೋಲ್‌ಗೆ ಒಳಗಾಗಿದ್ದಾರೆ.

‘ಇದು ಪಕ್ಷಿ, ಇದು ವಿಮಾನ, ಮಿಂಚನ ವೇಗ.. ಮೇಕ್ ಇನ್ ಇಂಡಿಯಾ ಯೋಜನೆಯಡಿ ತಯಾರಿಸಿದ ಭಾರತದ ಮೊದಲ ಸೆಮಿಸ್ಪೀಡ್ ರೈಲು ಇದೇ ನೋಡಿ’ ಎಂದು ಗೋಯಲ್ ಅವರು ವಿಡಿಯೊವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. 

ಆದರೆ ಗೋಯಲ್ ಅವರು ಹಾಕಿದ ವೇಗದ ರೈಲಿನ ವಿಡಿಯೊಗೂ, ಟ್ವಿಟರ್ ಬಳಕೆದಾರ ಅಭಿಷೇಕ್ ಜೈಸ್ವಾಲ್ ಎಂಬುವರು ಹಂಚಿಕೊಂಡ ಅದೇ ರೈಲಿನ ವೇಗದ ವಿಡಿಯೊಗೂ ವ್ಯತ್ಯಾಸವಿದೆ ಎಂದು ಟ್ವಿಟರ್ ಬಳಕೆದಾರರು ವ್ಯಂಗ್ಯ ಮಾಡಿದ್ದಾರೆ.

ವಿಡಿಯೊವನ್ನು ಎರಡು ಬಾರಿ ಫಾರ್ವರ್ಡ್ ಮಾಡುವ ಮೂಲಕ ರೈಲಿನ ನಿಜವಾದ ವೇಗವ‌ನ್ನು ಮರೆಮಾಚಲಾಗಿದೆ ಎಂದು ಅಭಿಷೇಕ್ ಆರೋಪಿಸಿದ್ದಾರೆ. ಬಹುತೇಕರು ಅಭಿಷೇಕ್ ಮಾತಿಗೆ ದನಿಗೂಡಿಸಿದ್ದಾರೆ. ವಿಡಿಯೊ ಚೆನ್ನಾಗಿ ಕಾಣವಂತೆ ಮಾಡಲು ಅದನ್ನು ತಿರುಚಲಾಗಿದೆ ಎಂದಿದ್ದಾರೆ. ಕಾಂಗ್ರೆಸ್ ಕೂಡಾ ವಿಡಿಯೊಗೆ ಆಕ್ಷೇಪ ಎತ್ತಿದೆ. 

ದೆಹಲಿ–ವಾರಾಣಸಿ ನಡುವೆ ಸಂಚರಿಸಲಿರುವ ಈ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಫೆ.15ರಂದು ಚಾಲನೆ ನೀಡಲಿದ್ದಾರೆ. ಪರೀಕ್ಷಾರ್ಥ ಓಡಾಟ ಯಶಸ್ವಿಯಾಗಿದ್ದು, ಗಂಟೆಗೆ 180 ಕಿ.ಮೀ ವೇಗದಲ್ಲಿ ರೈಲು ಸಂಚರಿಸಲಿದೆ ಎಂದು ಇಲಾಖೆ ತಿಳಿಸಿತ್ತು. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 6

  Angry

Comments:

0 comments

Write the first review for this !