ಗುರುಗ್ರಾಮ: ನಾಲ್ಕು ಮಹಡಿಯ ಕಟ್ಟಡ ಕುಸಿದು ಇಬ್ಬರು ದುರ್ಮರಣ

7
ಐದು ಮಂದಿ ಸಿಲುಕಿಕೊಂಡಿರುವ ಶಂಕೆ

ಗುರುಗ್ರಾಮ: ನಾಲ್ಕು ಮಹಡಿಯ ಕಟ್ಟಡ ಕುಸಿದು ಇಬ್ಬರು ದುರ್ಮರಣ

Published:
Updated:
Prajavani

ಗುರುಗ್ರಾಮ: ನಿರ್ಮಾಣ ಹಂತದಲ್ಲಿದ್ದ ನಾಲ್ಕು ಮಹಡಿಯ ಕಟ್ಟಡ ಕುಸಿದು, ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಐದು ಮಂದಿ ಕಟ್ಟಡದ ಒಳಗೆ ಸಿಲುಕಿರುವ ಸಾಧ್ಯತೆಯಿದೆ.

ಇಲ್ಲಿನ ಗುರುಗ್ರಾಮ ಸೆಕ್ಟರ್‌ನ 65ರಲ್ಲಿದ್ದ ಉಲ್ಲಾವಾಸ್‌ ಗ್ರಾಮದಲ್ಲಿ ಕಟ್ಟಡ ಕುಸಿದಿರುವ ಬಗ್ಗೆ ಸ್ಥಳೀಯರು ಬೆಳಿಗ್ಗೆ 5.14ರ ವೇಳೆಗೆ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಸುಮಾರು ಒಂದು ತಾಸಿನ ಬಳಿಕ ಇಬ್ಬರು ಕಾರ್ಮಿಕರ ಮೃತದೇಹವನ್ನು ಹೊರತೆಗೆದರು.

’ಕಾಂಕ್ರೀಟ್‌, ಕಬ್ಬಿಣ, ಹೊರತೆಗೆಯುವುದು ರಕ್ಷಣಾ ತಂಡಕ್ಕೂ ಸವಾಲಾಗಿದೆ. ಕಟ್ಟಡ ಕುಸಿದುಬೀಳುವ ಏಳು ಮಂದಿ ಕೆಲಸ ಮಾಡುತ್ತಿದ್ದರು. ಎಲ್ಲರೂ ಕಟ್ಟಡದ ಒಳಗೆ ಸಿಲುಕಿದ್ದಾರೆ‘ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿ ಇಶಾಂಸಿಂಗ್‌ ತಿಳಿಸಿದರು.

ತಕ್ಷಣವೇ ಗಾಜಿಯಾಬಾದ್‌ ಹಾಗೂ ನವದೆಹಲಿಯಿಂದ ವಿಪತ್ತು ನಿರ್ವಹಣಾ ಪಡೆಯ ಎರಡು ತಂಡಗಳನ್ನು ಕರೆಸಿಕೊಳ್ಳಲಾಗಿದೆ. ‌ನಾಲ್ಕನೇ ಮಹಡಿಯ ಮೇಲ್ಛಾವಣಿ ನಿರ್ಮಿಸಲು ಕಾಂಕ್ರಿಟ್‌ ತುಂಬುತ್ತಿದ್ದ ವೇಳೆ ಕಟ್ಟಡ ಕುಸಿದುಬಿದ್ದಿದೆ. ಘಟನೆ ನಡೆಯುತ್ತಿದ್ದಂತೆಯೇ, ಮಾಲೀಕ ನಾಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !