ಇಬ್ಬರು ವಿದೇಶಿ ಮಹಿಳೆಯರಿಗೆ ಲೈಂಗಿಕ ಕಿರುಕುಳ: ಹೋಟೆಲ್‌ ಮ್ಯಾನೇಜರ್‌ ಬಂಧನ

7

ಇಬ್ಬರು ವಿದೇಶಿ ಮಹಿಳೆಯರಿಗೆ ಲೈಂಗಿಕ ಕಿರುಕುಳ: ಹೋಟೆಲ್‌ ಮ್ಯಾನೇಜರ್‌ ಬಂಧನ

Published:
Updated:

ಜೈಪುರ: ಮೆಕ್ಸಿಕೊದ ಇಬ್ಬರು ಪ್ರವಾಸಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಇಲ್ಲಿನ ಪಂಚತಾರಾ ಹೋಟೆಲೊಂದರ ಮ್ಯಾನೇಜರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ರಿಷಿರಾಜ್‌ ಸಿಂಗ್‌ ಬಂಧಿತ ಮ್ಯಾನೇಜರ್‌. ಈತ ಮಹಿಳೆಯರು ತಂಗಿದ್ದ ಕೋಣೆಗೆ ತೆರಳಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು  ಪೊಲೀಸರು ತಿಳಿಸಿದ್ದಾರೆ.

‘ಮಹಿಳೆಯರು ನೀಡಿದ ದೂರು ಹಾಗೂ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದಿದ್ದಾರೆ.

‘ಮಹಿಳೆಯರು ದೆಹಲಿಗೆ ತೆರಳಿದ್ದು, ಅವರಿಂದ ಹೇಳಿಕೆ ಪಡೆಯಲು ತಂಡವೊಂದನ್ನು ಅಲ್ಲಿಗೆ ಕಳುಹಿಸಲಾಗಿದೆ’ ಎಂದೂ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !