ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಪಡೆಗಳ ಕಾರ್ಯಾಚರಣೆ: ಪುಲ್ವಾಮಾದಲ್ಲಿ ಮತ್ತೆ ಆರು ಉಗ್ರರ ಹತ್ಯೆ

Last Updated 19 ಜೂನ್ 2020, 6:55 IST
ಅಕ್ಷರ ಗಾತ್ರ

ಶ್ರೀನಗರ:ಜಮ್ಮು– ಕಾಶ್ಮೀರದ ಪುಲ್ವಾಮಾ ಮತ್ತು ಶೋಪಿಯಾನ್‌ ಜಿಲ್ಲೆಗಳಲ್ಲಿ ನಡೆದ‌ ಪ್ರತ್ಯೇಕ ಎರಡು ಕಾರ್ಯಾಚರಣೆಗಳಲ್ಲಿ ಶುಕ್ರವಾರ ಆರು ಉಗ್ರರು ಹತರಾಗಿದ್ದಾರೆ.

ಇದರಿಂದಾಗಿ ಗುರುವಾರ ರಾತ್ರಿಯಿಂದ ನಡೆದ ಕಾರ್ಯಾಚರಣೆಗಳಿಗೆ ಒಟ್ಟು ಎಂಟು ಉಗ್ರರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪುಲ್ವಾಮಾ ಕಾರ್ಯಾಚರಣೆಯಲ್ಲಿ ಶುಕ್ರವಾರ ಇಬ್ಬರು ಉಗ್ರರು ಹತ್ಯೆಗೀಡಾದರೆ, ಶೋಪಿಯಾನ್‌ನಲ್ಲಿ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ.

ಪುಲ್ವಾಮಾದ ಪಾಂಪೊರ್‌ ಬಳಿಯ ಮಿಜ್‌ನಲ್ಲಿ ಉಗ್ರರು ಅಡಗಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಭದ್ರತಾ ಪಡೆಗಳು ಅಲ್ಲಿ ಗುರುವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದರು.

ಉಗ್ರರಿಗೆ ಶೋಧ ನಡೆಸುತ್ತಿದ್ದಾಗ ಅವರು ಗುಂಡಿನ ದಾಳಿ ನಡೆಸಿದ್ದರಿಂದ ಭದ್ರತಾ ಪಡೆ ಸಿಬ್ಬಂದಿಯೂ ಪ್ರತಿ ದಾಳಿ ನಡೆಸಬೇಕಾಯಿತು. ಈ ಸಂದರ್ಭದಲ್ಲಿ ಗುರುವಾರಒಬ್ಬ ಉಗ್ರ ಹತನಾಗಿದ್ದ. ಆದರೆ ಇತರ ಇಬ್ಬರು ಸಮೀಪದ ಮಸೀದಿ ಪ್ರವೇಶಿಸಿ ಆಶ್ರಯ ಪಡೆದಿದ್ದರು. ಮಸೀದಿಯನ್ನು ಸುತ್ತುವರಿದ ಭದ್ರತಾ ಪಡೆ ರಾತ್ರಿಯಡೀ ನಡೆಸಿದ ಕಾರ್ಯಾಚರಣೆಗೆ ಶುಕ್ರವಾರ ಬೆಳಿಗ್ಗೆ ಇಬ್ಬರು ಉಗ್ರರು ಬಲಿಯಾದರು ಎಂದು ಪೊಲೀಸರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT