ಮಹಿಳಾ ದಿನಾಚರಣೆ ಮುನ್ನಾದಿನ ಇಬ್ಬರು ಮಹಿಳಾ ಮಾವೋವಾದಿಗಳು ಶರಣಾಗತಿ

ಭಾನುವಾರ, ಮಾರ್ಚ್ 24, 2019
32 °C

ಮಹಿಳಾ ದಿನಾಚರಣೆ ಮುನ್ನಾದಿನ ಇಬ್ಬರು ಮಹಿಳಾ ಮಾವೋವಾದಿಗಳು ಶರಣಾಗತಿ

Published:
Updated:

ಕೋರಪುಟ್‌(ಒಡಿಶಾ): ಮಹಿಳಾ ದಿನಾಚರಣೆ ಮುನ್ನಾದಿನ ಗುರುವಾರ ಇಬ್ಬರು ಮಹಿಳಾ ಮಾವೋವಾದಿಗಳು ಒಡಿಶಾ ಪೊಲೀಸರಿಗೆ ಶರಣಾಗಿದ್ದಾರೆ.

ಮಾವೋವಾದಿ ವಿರೋಧಿ ಕಾರ್ಯಾಚರಣೆ ಮತ್ತು ಈ ಸಂಬಂಧ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಕೋರಪುಟ್‌ ಜಿಲ್ಲೆಯಲ್ಲಿ ಡಿಜಿಪಿ ರಾಜೇಂದ್ರ ಪ್ರಸಾದ್‌ ಶರ್ಮಾ ಅವರ ಮುಂದೆ ಹಾಜರಾಗುವ ಮೂಲಕ ಇಬ್ಬರು ಮಹಿಳಾ ಮಾವೋವಾದಿಗಳು ಶರಣಾಗಿದ್ದಾರೆ. 

ಮಡಿ ಸುಕಾಂತಿ ಮತ್ತು ಕೌಸಲ್ಯಾ ಖಿಲಾ ಶರಣಾದ ಇಬ್ಬರು ಮಹಿಳಾ ಮಾವೋವಾದಿಗಳಾಗಿದ್ದವರು.

ಪೊಲೀಸರ ವರದಿ ಪ್ರಕಾರ, ಮಡಿ ಸುಕಾಂತಿ ಒಂದು ಪ್ರದೇಶ ಸಮಿತಿ ಸದಸ್ಯೆ, ಕೌಸಲ್ಯಾ ಖಿಲಾ ಆ ಭಾಗದ ಸದಸ್ಯೆಯಾಗಿದ್ದರು. ಈ ಇಬ್ಬರೂ ಬಂಡುಕೋರರು ಮಾಲ್ಕಂಗಿರಿ ಜಿಲ್ಲೆಯಲ್ಲಿ ನಡೆದ ಹಲವು ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಡಿಶಾ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ಯೋಜನೆ ಅನ್ವಯ ಇಬ್ಬರಿಗೂ ಪುನರ್ವಸತಿ ಮತ್ತು ಆರ್ಥಿಕ ನೆರವನ್ನು ಒದಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
 

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !