ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನಿಸಿದ ಮಹಿಳೆಯರಿಗೆ ನಿಲಯ್ಕಲ್‍ನಲ್ಲಿ ತಡೆ

Last Updated 19 ಜನವರಿ 2019, 3:25 IST
ಅಕ್ಷರ ಗಾತ್ರ

ನಿಲಯ್ಕಲ್: ಶಬರಿಮಲೆ ಅಯ್ಯಪ್ಪ ದರ್ಶನಕ್ಕಾಗಿ ರೇಷ್ಮಾ ನಿಶಾಂತ್ ಮತ್ತು ಶಾನಿಲಾ ಸಜೇಶ್ ಮತ್ತೊಮ್ಮೆ ದೇಗುಲಕ್ಕೆ ಆಗಮಿಸಿದ್ದು, ಅವರನ್ನು ನಿಲಯ್ಕಲ್‍ನಿಂದಲೇ ವಾಪಸ್ ಕಳುಹಿಸಲಾಗಿದೆ.

ಶನಿವಾರ ಮುಂಜಾನೆ 5.15ಕ್ಕೆ ರೇಷ್ಮಾ, ಶಾನಿಲಾ ಸೇರಿದ 8 ಮಂದಿ ತಂಡ ಶಬರಿಮಲೆ ಹತ್ತಲು ಶುರು ಮಾಡಿದ್ದಾರೆ. ಆ ಹೊತ್ತಿಗೆ ಅಲ್ಲಿ ಪ್ರತಿಭಟನಾಕಾರರು ಇರಲಿಲ್ಲ. ಆದರೆ ಪಂಪಾದಿಂದ ಸನ್ನಿಧಾನದವರೆಗೆ ಶಬರಿಮಲೆ ಕರ್ಮ ಸಮಿತಿ ಸದಸ್ಯರು ಮತ್ತು ಅಯ್ಯಪ್ಪ ಭಕ್ತರು ತಡೆಯೊಡ್ಡಲು ನಿಂತಿದ್ದರು.

ಈ ಹೊತ್ತಲ್ಲಿ ಮಹಿಳೆಯರನ್ನು ಪಂಪಾದಿಂದ ಸನ್ನಿಧಾನಕ್ಕೆ ಕರೆದುಕೊಂಡು ಹೋದರೆ ಅಲ್ಲಿ ಗಲಾಟೆಯಾಗುವ ಸಾಧ್ಯತೆ ಇದೆ ಎಂದು ಅರಿತ ಪೊಲೀಸರು ಮಹಿಳೆಯರಲ್ಲಿ ವಾಪಸ್ ಹೋಗುವಂತೆ ಹೇಳಿದ್ದಾರೆ.ನಿಲಯ್ಕಲ್ ಪೊಲೀಸ್ ವಿಶೇಷ ಅಧಿಕಾರಿ ಜಮಾಲುದ್ದೀನ್ ಇವರಲ್ಲಿ ಮಾತುಕತೆ ನಡೆಸಿ ಅಲ್ಲಿನ ಪರಿಸ್ಥಿತಿ ಬಗ್ಗೆ ಹೇಳಿದ್ದಾರೆ. ಆದರೆ ಸನ್ನಿಧಾನಕ್ಕೆ ಹೋಗಲೇ ಬೇಕೆಂದು ಮಹಿಳೆಯರು ಹಠ ಹಿಡಿದಿದ್ದಾರೆ.

ಇದಕ್ಕೆ ಒಪ್ಪಿದ ಪೊಲೀಸರು ಪಂಪಾವರೆಗೆ ನಾವು ಕರೆದುಕೊಂಡು ಹೋಗುವುದಾಗಿಯೂ ಅಲ್ಲಿ ಗಲಾಟೆ ನಡೆದರೆ ವಾಪಾಸಾಗಬೇಕೆಂದು ಹೇಳಿದ್ದಾರೆ.ಪೊಲೀಸರ ಈ ನಿರ್ಧಾರಕ್ಕೆ ಮಹಿಳೆಯರು ಒಪ್ಪಲಿಲ್ಲ.ಆನಂತರ ಡಿಜಿಪಿ ಅವರಿಗೆ ವಿಷಯತಿಳಿಸಿದ ಪೊಲೀಸರು, ಮಹಿಳೆಯರಲ್ಲಿ ಅಲ್ಲಿಂದ ಮರಳಲು ಹೇಳಿದ್ದಾರೆ.

ಮಹಿಳೆಯರು ದೇಗುಲಕ್ಕೆ ಆಗಮಿಸಿರುವ ಕಾರಣ ಪಂಪಾ ಸೇರಿದಂತೆ ಇತರ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT