ಗುರುವಾರ , ಡಿಸೆಂಬರ್ 12, 2019
17 °C

ಉದ್ಧವ್‌ ಠಾಕ್ರೆ ನಮಸ್ಕರಿಸಿದ್ದು ಸೋನಿಯಾ ಗಾಂಧಿಗಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

‘ಮಹಾ ವಿಕಾಸ ಆಘಾಡಿ‍’ಯ ನಾಯಕ ಉದ್ಧವ್‌ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸಾಕಷ್ಟು ಸುಳ್ಳು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಉದ್ಧವ್‌ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಭಾವಚಿತ್ರಕ್ಕೆ ನಮಸ್ಕರಿಸುತ್ತಿರುವ ಚಿತ್ರ ಸಾಕಷ್ಟು ಗಮನ ಸಳೆಯುತ್ತಿದೆ.

ವೈರಲ್‌ ಆಗಿರುವ ಈ ಚಿತ್ರವನ್ನು ಗೂಗಲ್‌ನಲ್ಲಿ ರಿವರ್ಸ್‌ ಇಮೆಜ್‌ ಸರ್ಚ್‌ನಲ್ಲಿ ಹಾಕಿ ನೋಡಿದಾಗ ಇದೊಂದು ಎಡಿಟ್‌ ಮಾಡಿರುವ ಚಿತ್ರ ಎಂದು ತಿಳಿದುಬಂದಿದೆ. ‌

 

'ಮಹಾ ವಿಕಾಸ ಆಘಾಡಿ' ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ಉದ್ಧವ್‌ ಅವರು ಬಾಳ ಠಾಕ್ರೆ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು ಎಂದು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್‌ ಮಾಡಿತ್ತು. ಪಿಟಿಐ ಸುದ್ದಿಸಂಸ್ಥೆ ತೆಗೆದ ಆ ಚಿತ್ರದಲ್ಲಿ ಬಾಳ ಠಾಕ್ರೆ ಚಿತ್ರದ ಜಾಗದಲ್ಲಿ ಸೋನಿಯಾ ಚಿತ್ರವನ್ನು ಅಂಟಿಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು