ಆಧಾರ್‌ಗೆ ಕನ್ನ ಅಸಾಧ್ಯ: ಟ್ರಾಯ್‌ ಅಧ್ಯಕ್ಷ ಶರ್ಮಾ ಪುನರುಚ್ಚಾರ

7

ಆಧಾರ್‌ಗೆ ಕನ್ನ ಅಸಾಧ್ಯ: ಟ್ರಾಯ್‌ ಅಧ್ಯಕ್ಷ ಶರ್ಮಾ ಪುನರುಚ್ಚಾರ

Published:
Updated:

ನವದೆಹಲಿ: ಆಧಾರ್‌ ಸಂಖ್ಯೆ ಬಳಸಿಕೊಂಡು ಅದರಲ್ಲಿರುವ ಖಾಸಗಿ ಮಾಹಿತಿಗೆ ಕನ್ನ ಹಾಕಲು ಸಾಧ್ಯವಿಲ್ಲ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ಅಧ್ಯಕ್ಷ ಆರ್‌.ಎಸ್‌.ಶರ್ಮಾ ಪುನರುಚ್ಚರಿಸಿದ್ದಾರೆ.

‘ಆಧಾರ್‌ ಸಂಖ್ಯೆ ಅಥವಾ ಬಯೋಮೆಟ್ರಿಕ್‌ ಸಂಖ್ಯೆ ನೆರವಿನಿಂದ ಡಿಜಿಟಲ್‌ ಮಾಹಿತಿ ಕದಿಯಲು ಸಾಧ್ಯವಿಲ್ಲ ಎಂಬ ನಿಲುವಿಗೆ ಈಗಲೂ ನಾನು ಬದ್ಧ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಟ್ವಿಟರ್‌ ಖಾತೆಯಲ್ಲಿ ತಮ್ಮ ಆಧಾರ್‌ ಸಂಖ್ಯೆ ಪ್ರಕಟಿಸಿದ್ದ ಶರ್ಮಾ ‘ಆಧಾರ್‌ ಸಂಖ್ಯೆ ಬಳಸಿಕೊಂಡು ಬೇಕಾದರೆ ನನಗೆ ಹಾನಿ ಮಾಡಬಹುದು’ ಎಂದು ಕಳೆದ ತಿಂಗಳು ಹ್ಯಾಕರ್‌ಗಳಿಗೆ ಸವಾಲು ಹಾಕಿದ್ದರು.

ಈ ಸವಾಲು ಸ್ವೀಕರಿಸಿದ್ದ ಫ್ರಾನ್ಸ್‌ನ ಎಲಿಯಟ್ ಆಲ್ಡರ್‌ಸನ್ ಶರ್ಮಾ ಅವರ ಎಲ್ಲ ಮಾಹಿತಿಯನ್ನು ಟ್ವೀಟ್‌ರ್‌ ಖಾತೆಯಲ್ಲಿ ಪ್ರಕಟಿಸಿದ್ದರು.

‘ಆಧಾರ್‌ ದತ್ತಾಂಶಗಳು ಸುರಕ್ಷಿತವಾಗಿದ್ದು, ಕನ್ನ ಹಾಕಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಕೂಡ ಹೇಳಿತ್ತು.

‘ಬೇರೆಯವರು ಕೂಡ ತಮ್ಮ ಆಧಾರ್ ಸಂಖ್ಯೆ ಬಹಿರಂಗಪಡಿಸಲಿ ಎನ್ನುವುದು ನನ್ನ ಉದ್ದೇಶಾಗಿರಲಿಲ್ಲ. ಆಧಾರ್‌ ಸಂಖ್ಯೆ ನೆರವಿನಿಂದ ಮಾಹಿತಿ ಕದಿಯಲು ಸಾಧ್ಯವಿಲ್ಲ. ಅದು  ಸುರಕ್ಷಿತ ಎಂದು ಸಾಬೀತುಪಡಿಸುವುದಷ್ಟೇ ನನ್ನ ಉದ್ದೇಶವಾಗಿತ್ತು’ ಎಂದು ಶರ್ಮಾ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಶರ್ಮಾ ಇದೇ 9ರಂದು ನಿವೃತ್ತರಾಗಲಿದ್ದಾರೆ. ಈ ಮುನ್ನ ಅವರು ಯುಐಡಿಎಐಮೊದಲ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !