ಕೇರಳದ ಗಜಲ್ ಚಕ್ರವರ್ತಿ ಉಂಬಾಯಿ ನಿಧನ

7

ಕೇರಳದ ಗಜಲ್ ಚಕ್ರವರ್ತಿ ಉಂಬಾಯಿ ನಿಧನ

Published:
Updated:

ಕೊಚ್ಚಿ: ಮಲಯಾಳಿಗಳ ನೆಚ್ಚಿನ ಗಜಲ್ ಮಾಂತ್ರಿಕ ಉಂಬಾಯಿ (ಪಿ.ಎ ಇಬ್ರಾಹಿಂ) ಬುಧವಾರ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು ಸಂಜೆ  4.40ಕ್ಕೆ ಆಲುವಾದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ.

ನಾಲ್ಕು ದಶಕಗಳ ಕಾಲ ಸ್ವರಚಿತ ಗಜಲ್, ಹಳೆ ಚಲನಚಿತ್ರ ಹಾಡುಗಳನ್ನು ಗಜಲ್ ರೂಪದಲ್ಲಿ ಪ್ರಸ್ತುತ ಪಡಿಸಿ ಜನ ಮನಗೆದ್ದ ಗಾಯಕರಾಗಿದ್ದಾರೆ ಉಂಬಾಯಿ. ಪಾಡುಗ ಸೈಗಾಲ್ ಪಾಡು, ಅಗಲೆ ಮೌನಂ ಪೋಲ್, ಒರಿಕ್ಕಲ್ ನೀ ಪರಞು ಮೊದಲಾದವುಗಳು ಇವರ ಪ್ರಸಿದ್ಧ ಗಜಲ್‍ಗಳಾಗಿವೆ.

ಎಂ. ಜಯಚಂದ್ರನ್ ಜತೆ ನೋವಲ್ ಎಂಬ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದರಿವರು.
ಮಟ್ಟಾಂಚೇರಿಯ ಕಲ್ವತ್ತಿ ಎಂಬಲ್ಲಿ 1950ರಲ್ಲಿ ಅಬು ಮತ್ತು ಫಾತಿಮಾ ಅವರ ಪುತ್ರನಾಗಿ ಜನಿಸಿದ ಉಂಬಾಯಿ ಅವರು ಪತ್ನಿ ಹಫ್ಸಾ ಮತ್ತು ಮೂರು ಮಕ್ಕಳನ್ನು ಅಗಲಿದ್ದಾರೆ.
 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !