ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ವಿದ್ಯಾವಂತರಿಗಿಲ್ಲ ಉದ್ಯೋಗ

Last Updated 31 ಜನವರಿ 2019, 20:35 IST
ಅಕ್ಷರ ಗಾತ್ರ

ನವದೆಹಲಿ: ಗ್ರಾಮೀಣ ಪ್ರದೇಶದ ವಿದ್ಯಾವಂತ ಮಹಿಳೆಯರ ನಿರುದ್ಯೋಗ ಪ್ರಮಾಣ 2017–18ರಲ್ಲಿ ಶೇ 17.3ರಷ್ಟಕ್ಕೆ ಏರಿದೆ ಎಂದು ಎನ್‌ಎಸ್‌ಎಸ್‌ಒದ ಸೋರಿಕೆಯಾದ ವರದಿ ಹೇಳಿದೆ.

2004–15ರಿಂದ 2011–12ರ ಅವಧಿಯಲ್ಲಿ ಈ ನಿರುದ್ಯೋಗ ಪ್ರಮಾಣ ಶೇ 9.7ರಿಂದ ಶೇ 15.2ರ ನಡುವೆ ಇತ್ತು. ಇದೇ ಅವಧಿಯಲ್ಲಿ ಗ್ರಾಮೀಣ ವಿದ್ಯಾವಂತ ಪುರುಷರ ನಿರುದ್ಯೋಗ ಪ್ರಮಾಣ ಶೇ 3.5ರಿಂದ ಶೇ 4.4ರಷ್ಟಿತ್ತು. ಆದರೆ,2017–18ರಲ್ಲಿ ಅದು ಶೇ 10.5ರಷ್ಟಕ್ಕೆ ಏರಿದೆ.

15–29ರ ವಯೋಮಾನದ ಗ್ರಾಮೀಣ ಪುರುಷರಲ್ಲಿ ನಿರುದ್ಯೋಗ ಪ್ರಮಾಣವು ಭಾರಿ ಏರಿಕೆ ಕಂಡಿದೆ. 2011–12ರಲ್ಲಿ ಇದು ಶೇ 5ರಷ್ಟಿದ್ದರೆ 2017–18ರಲ್ಲಿ ಅದು ಶೇ 17.4ಕ್ಕೆ ಏರಿದೆ. ಗ್ರಾಮೀಣ ಮಹಿಳೆಯರ ನಿರುದ್ಯೋಗ ಪ್ರಮಾಣವು 2011–12ರಲ್ಲಿ ಶೇ 4.8ರಷ್ಟಿತ್ತು. 2017–18ರಲ್ಲಿ ಅದು ಶೇ 13.6ಕ್ಕೆ ಏರಿದೆ.

ನಿರುದ್ಯೋಗ ಏರಿಕೆ ಭಾರಿ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.

**

ಅಂಕಿ ಅಂಶಗಳು ಅನುಕೂಲಕರವಾಗಿಲ್ಲ ಎಂದಾದರೆ ಅವನ್ನು ತಿರುಚಿ; ತಜ್ಞರು ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದರೆ ಅವರನ್ನು ಮೂಲೆಗುಂಪು ಮಾಡುವ ಮೂಲಕ ರಾಜೀನಾಮೆ ಕೊಡುವ ಪರಿಸ್ಥಿತಿ ಸೃಷ್ಟಿಸಿ; ದತ್ತಾಂಶ ತಿರುಚುವಿಕೆ ಸಾಧ್ಯವಾಗದಿದ್ದರೆ ಲೆಕ್ಕಾಚಾರದ ನೆಲೆಗಟ್ಟನ್ನೇ ಬದಲಾಯಿಸಿ.

-ಅಭಿಷೇಕ್‌ ಮನು ಸಿಂಘ್ವಿ, ಕಾಂಗ್ರೆಸ್‌ ಮುಖಂಡ

**

ಮಾಧ್ಯಮದಲ್ಲಿ ಪ್ರಕಟ ಆಗಿರುವುದು ಕರಡು ವರದಿ. ಇದನ್ನು ಪರಿಶೀಲಿಸುವ ಕಾರ್ಯ ಇನ್ನಷ್ಟೇ ನಡೆಯಬೇಕಿದೆ. ಮಾರ್ಚ್‌ನಲ್ಲಿ ವರದಿ ಪ್ರಕಟವಾಗಲಿದೆ.

-ರಾಜೀವ್‌ ಕುಮಾರ್‌, ನೀತಿ ಆಯೋಗದ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT