ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020ರಿಂದ ಸಮಗ್ರ ಶಿಕ್ಷಕ ಶಿಕ್ಷಣ ಕೋರ್ಸ್‌?

Last Updated 10 ಜೂನ್ 2019, 18:42 IST
ಅಕ್ಷರ ಗಾತ್ರ

ನವದೆಹಲಿ: ವಿಜ್ಞಾನ ಮತ್ತು ಮಾನವೀಯ ವಿಭಾಗದಲ್ಲಿ ನಾಲ್ಕು ವರ್ಷಗಳ ಸಮಗ್ರ ಶಿಕ್ಷಕ ಶಿಕ್ಷಣ ಕೋರ್ಸ್‌ಗಳು (ಐಟಿಇಪಿ) ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗುವ ಸಂಭವವಿದೆ.

2020ರಿಂದ ಕೋರ್ಸ್‌ ಆರಂಭಿಸುವುದಕ್ಕಾಗಿ ಅನುಮೋದನೆ ಪಡೆಯಲು ಕೇಂದ್ರೀಯ ಮತ್ತು ರಾಜ್ಯ ವಿಶ್ವವಿದ್ಯಾಲಯಗಳು, ಪದವಿ ಕಾಲೇಜುಗಳು ಹಾಗೂ ಖಾಸಗಿ ವಿಶ್ವವಿದ್ಯಾಲಯಗಳಿಂದ ಶಿಕ್ಷಕರ ಶಿಕ್ಷಣದ ರಾಷ್ಟ್ರೀಯ ಪರಿಷತ್‌ (ಎನ್‌ಸಿಟಿಇ) ಅರ್ಜಿಗಳನ್ನು ಆಹ್ವಾನಿಸಿದೆ.

ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ತರಗತಿಗಳ ಹಂತದಲ್ಲಿ ಗುಣಮಟ್ಟದ ಶಿಕ್ಷಕರನ್ನು ರೂಪಿಸುವ ಕ್ರಮವಾಗಿ ಸಮಗ್ರ ಶಿಕ್ಷಕ ತರಬೇತಿ ಕಾರ್ಯಕ್ರಮ ರೂಪಿಸಲು ಎನ್‌ಸಿಟಿಇ ಈ ಮೊದಲು ಚಿಂತನೆ ನಡೆಸಿತ್ತು.

ಶಿಕ್ಷಕರ ಶಿಕ್ಷಣ ಕೋರ್ಸ್‌ಗಳಲ್ಲಿ ವಿಶ್ವದ ಅತ್ಯುತ್ತಮ ಮಾದರಿಗಳನ್ನು ಅಳವಡಿಸಿಕೊಳ್ಳುವ ಉದ್ದೇಶದ ಈ ಎರಡು ಕೋರ್ಸ್‌ಗಳು ಬದ್ಧತೆಯುಳ್ಳ, ಜವಾಬ್ದಾರಿಯುತ ಮತ್ತು ವೃತ್ತಿಪರ ಶಿಕ್ಷಕರನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT