ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದಲ್ಲಿ ಈರುಳ್ಳಿ–ಬೆಳ್ಳುಳ್ಳಿ ಹಾರದ ಮದುವೆ; ಉಡುಗೊರೆಯೂ ಈರುಳ್ಳಿಮಯ!

ವಿಡಿಯೊ ಸುದ್ದಿ
Last Updated 14 ಡಿಸೆಂಬರ್ 2019, 5:02 IST
ಅಕ್ಷರ ಗಾತ್ರ

ವಾರಾಣಸಿ:ದೇಶದಲ್ಲೆಡೆ ಈರುಳ್ಳಿ ಕೊಳ್ಳುವ ಮುನ್ನವೇ ಗ್ರಾಹಕರಲ್ಲಿ ಕಣ್ಣೀರು ತರಿಸುತ್ತಿದ್ದೆ. ವಾರಕ್ಕೆ ಎರಡು ಕಿಲೋ ಈರುಳ್ಳಿ ಬಳಸುತ್ತಿದ್ದವರು ಇಡೀ ತಿಂಗಳಿಗೆ ಅಷ್ಟೇ ಪ್ರಮಾಣ ಬಳಸಲು ಇನ್ನಿಲ್ಲದ ಶ್ರಮವಹಿಸಿದ್ದಾರೆ. ಈರುಳ್ಳಿ ಇಲ್ಲದೇ ಮಾಡುವ ತಿಂಡಿಗಳಿಗಾಗಿ ಗೂಗಲ್‌ನಲ್ಲೂ ಸಾಕಷ್ಟು ಹುಡುಕಾಟ ನಡೆಯುತ್ತಿರುವ ಸಂದರ್ಭದಲ್ಲೇ ಈರುಳ್ಳಿ–ಬೆಳ್ಳುಳ್ಳಿ ಮಯವಾದ ಮದುವೆಯೊಂದು ಗಮನ ಸೆಳೆದಿದೆ.

ಭಾರತೀಯ ಸಂಪ್ರದಾಯದಂತೆ ವಧು–ವರ ಕೊರಳಿಗೆ ಹೂವಿನ ಹಾರದ ಬದಲು ಈರುಳ್ಳಿ ಮತ್ತು ಬೆಳ್ಳುಳ್ಳಿ ಪೋಣಿಸಿ ಸಿದ್ಧಪಡಿಸಿದ ದುಬಾರಿ ಹಾರಗಳನ್ನು ಬದಲಿಸಿಕೊಂಡಿದ್ದರೆ. ಈ ಮೂಲಕ ಈರುಳ್ಳಿ ಬೆಲೆ ಏರಿಕೆಯ ವಿರುದ್ಧ ವಿನೂತ ರೀತಿಯಲ್ಲಿ ಪ್ರತಿಭಟನೆ ದಾಖಲಿಸಿದರು.

ನವ ಜೋಡಿಗೆ ಶುಭಕೋರಲು ಬಂದಿದ್ದ ಅತಿಥಿಗಳೂ ಸಹ ಈರುಳ್ಳಿ ಮತ್ತು ಬೆಳ್ಳುಳ್ಳಿ ತುಂಬಿದಬುಟ್ಟಿಗಳನ್ನು ಉಡುಗೊರೆಯಾಗಿ ನೀಡಿದರು.

'ತಿಂಗಳಿಂದ ಈರುಳ್ಳಿ ಬೆಲೆ ಗಗನಕ್ಕೇರಿರುವ ಕಾರಣ ಜನರು ಈರುಳ್ಳಿಯನ್ನು ಚಿನ್ನದ ರೀತಿ ಕಾಣುತ್ತಿದ್ದಾರೆ. ಪ್ರತಿ ಕಿಲೋ ಈರುಳ್ಳಿ ಕನಿಷ್ಠ ₹ 120 ಮುಟ್ಟಿದೆ. ಮದುವೆಯಲ್ಲಿ ವಧು–ವರ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾರಗಳನ್ನು ಧರಿಸಿದ್ದಾರೆ' ಎಂದು ಸಮಾಜವಾದಿ ಪಕ್ಷದ ಕಮಲ್‌ ಪಟೇಲ್‌ ಹೇಳಿದರು.

'ಭಿನ್ನ ರೀತಿಯಲ್ಲಿ ಬೆಲೆ ಏರಿಕೆಯನ್ನು ಹೊಸ ಜೋಡಿ ದಾಖಲಿಸಿದೆ. ನವ ವಿವಾಹಿತರಿಗೆ ಇದೊಂದು ಐತಿಹಾಸಿಕ ಘಟನೆಯಾಗಿದೆ' ಎಂದುಸಮಾಜವಾದಿ ಪಕ್ಷದಮತ್ತೊಬ್ಬ ಮುಖಂಡ ಸತ್ಯ ಪ್ರಕಾಶ್ ಅಭಿಪ್ರಾಯ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT