ಗುರುವಾರ , ಏಪ್ರಿಲ್ 2, 2020
19 °C
ನೇಮಕಾತಿ ಅಕ್ರಮ; ಉತ್ತರ ಪ್ರದೇಶ ಸರ್ಕಾರ ಆದೇಶ

ಜಲ ನಿಗಮದಲ್ಲಿ ಉದ್ಯೋಗ ಪಡೆದಿದ್ದ1300 ನೌಕರರು ಮನೆಗೆ

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಹಿಂದಿನ ಸಮಾಜವಾದಿ ಪಕ್ಷದ ಸರ್ಕಾರದ ಅವಧಿಯಲ್ಲಿ ಜಲ ನಿಗಮದಲ್ಲಿ ಉದ್ಯೋಗ ಪಡೆದಿದ್ದ 1,300 ನೌಕರರನ್ನು ಉತ್ತರ ಪ್ರದೇಶ ಸರ್ಕಾರ ಒಂದೇ ಬಾರಿಗೆ ವಜಾಗೊಳಿಸಿದೆ. ನೌಕರರ ಆಯ್ಕೆ ಪ್ರಕ್ರಿಯೆಯಲ್ಲಿ ದೋಷ ಕಂಡುಬಂದಿದೆ ಎಂದು ಸರ್ಕಾರ ಕಾರಣ ನೀಡಿದೆ. 122 ಸಹಾಯಕ ಎಂಜಿನಿಯರ್‌, 853 ಕಿರಿಯ ಎಂಜಿನಿಯರ್, 325 ಕ್ಲರ್ಕ್‌ಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ.

ಹೆಚ್ಚುವರಿ ಮುಖ್ಯ ಎಂಜಿನಿಯರ್ ಆದೇಶ ಹೊರಡಿಸಿದ್ದಾರೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಹಾಗೂ ಇಲಾಖೆ ನಡೆಸಿದ ತನಿಖಾ ವರದಿಗಳನ್ನು ಆಧರಿಸಿ ನೇಮಕಾತಿಯನ್ನು ಅನೂರ್ಜಿತಗೊಳಿಸಲಾಗಿದೆ.

2016–17ರಲ್ಲಿ ಎಸ್‌ಪಿ ಮುಖಂಡ ಅಜಂ ಖಾನ್ ಅವರು ಇಲಾಖೆಯ ಸಚಿವರಾಗಿದ್ದ ಅವಧಿಯಲ್ಲಿ ಈ ನೇಮಕಾತಿ ನಡೆದಿದ್ದವು. ವಂಚನೆ ಪ್ರಕರಣದಲ್ಲಿ ಅವರು ಈಗ ಜೈಲಿನಲ್ಲಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು