ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪ್ರದೇಶ: ಸಿಬ್ಬಂದಿಯ ವಿವಿಧ ಭತ್ಯೆ ರದ್ದುಪಡಿಸಿದ ಸರ್ಕಾರ

Last Updated 13 ಮೇ 2020, 20:00 IST
ಅಕ್ಷರ ಗಾತ್ರ

ಲಖನೌ: ಕೊರೊನಾ ಪಿಡುಗಿನಿಂದಾಗಿ ಉಂಟಾಗಿರುವ ಆರ್ಥಿಕ ಹೊರೆಯನ್ನು ನಿಭಾಯಿಸುವ ಉದ್ದೇಶದಿಂದ, ಸರ್ಕಾರಿ ನೌಕರರಿಗೆ ನೀಡುತ್ತಿರುವ ವಿವಿಧ ಭತ್ಯೆಗಳನ್ನು ರದ್ದುಪಡಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.

ಈ ಕ್ರಮದಿಂದಾಗಿ ಸರ್ಕಾರ ಕನಿಷ್ಠ ₹ 1,500 ಕೋಟಿ ಉಳಿತಾಯ ಮಾಡುವ ಗುರಿ ಹೊಂದಿದೆ.

ಹಣಕಾಸು ಇಲಾಖೆ ಪ್ರತ್ಯೇಕ ಆದೇಶಗಳ ಮೂಲಕ ವಿವಿಧ ಭತ್ಯೆಗಳನ್ನು ರದ್ದುಪಡಿಸಿದೆ. ಪೊಲೀಸ್‌ ಇಲಾಖೆಯ ವಿವಿಧ ವಿಭಾಗಗಳ ಸಿಬ್ಬಂದಿ, ಎಲ್ಲಾ ಇಲಾಖೆಯ ಕಿರಿಯ ಎಂಜಿನಿಯರ್‌ಗಳು, ಪಿಡಬ್ಲ್ಯುಡಿ ಸಿಬ್ಬಂದಿ, ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಪಿಂಚಣಿ ದಾಖಲೆಗಳ ಉಸ್ತುವಾರಿ ನೋಡಿಕೊಳ್ಳುವ ಉದ್ಯೋಗಿಗಳ ವಿವಿಧ ಭತ್ಯೆಗಳನ್ನು ರದ್ದುಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT