ಲೈಂಗಿಕ ಕಿರುಕುಳಕ್ಕೆ ಬೇಸತ್ತು ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

6

ಲೈಂಗಿಕ ಕಿರುಕುಳಕ್ಕೆ ಬೇಸತ್ತು ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

Published:
Updated:

ಹೈದರಾಬಾದ್: ತಿರುಪತಿಯ ಶ್ರೀವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಸ್‌ವಿಐಎಂಎಸ್) ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ.ಬಿ. ಶಿಲ್ಪಾ, ಪ್ರಾಧ್ಯಾಪಕರ ಲೈಂಗಿಕ ದೌರ್ಜನ್ಯಕ್ಕೆ ಬೇಸತ್ತು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

‘ಲೈಂಗಿಕವಾಗಿ ಸಹಕರಿಸುವಂತೆ ಶಿಲ್ಪಾ ಅವರನ್ನು ಪ್ರಾಧ್ಯಾಪಕರಾದ ಡಾ. ರವಿ, ಡಾ.ಶಿವಕುಮಾರ್‌ ಹಾಗೂ ಡಾ.ಕೀರ್ತಿ ಪೀಡಿಸುತ್ತಿದ್ದರು. ಅಂತಿಮ ವರ್ಷದ ಪರೀಕ್ಷೆಯ ಫಲಿತಾಂಶ ಸೋಮವಾರವಷ್ಟೆ ಪ್ರಕಟವಾಗಿತ್ತು. ಈ ಪರೀಕ್ಷೆಯಲ್ಲಿ ಶಿಲ್ಪಾರನ್ನು ಅವರು ಅನುತ್ತೀರ್ಣಗೊಳಿಸಿದ್ದಾರೆ’ ಎಂದು ಕಾಲೇಜಿನ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. 

ಪ್ರಾಧ್ಯಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಧರಣಿ ನಡೆಸಿದ್ದಾರೆ. 

ಲೈಂಗಿಕ ದೌರ್ಜನ್ಯ ಕುರಿತು ರಾಜ್ಯಪಾಲರಿಗೆ ಹಾಗೂ ರಾಜ್ಯದ ಐಟಿ ಸಚಿವರಿಗೆ ಶಿಲ್ಪಾ ಅವರು ದೂರು ನೀಡಿದ್ದರು.

‘ರಾಜ್ಯಪಾಲರ ನಿರ್ದೇಶನದ ಮೇರೆಗೆ ವಿಶ್ವವಿದ್ಯಾಲಯ ತನಿಖೆ ನಡೆಸಿತು. ಆದರೆ ಆ ವರದಿ ಬಹಿರಂಗಪಡಿಸುವ ಬದಲಿಗೆ, ಶಿಲ್ಪಾ ಮಾನಸಿಕ ಅಸ್ವಸ್ಥೆ ಎಂದು ಅಧಿಕಾರಿಗಳು ಹೇಳಿದ್ದರು’ ಎಂದು ಶಿಲ್ಪಾ ಸ್ನೇಹಿತರು ಹೇಳಿದ್ದಾರೆ. 

‘ಕಾಲೇಜಿನಲ್ಲಿ ತಮಗೆ ನ್ಯಾಯ ದೊರಕದೆ ಹೋಗಿದ್ದಕ್ಕಾಗಿ ಅವರು ನೊಂದುಕೊಂಡಿದ್ದರು. ಅವಮಾನದಿಂದಾಗಿಯೇ ಅವರು ಈ ರೀತಿ ಮಾಡಿಕೊಂಡಿದ್ದಾರೆ. ನಮ್ಮ ನಡುವೆ ಯಾವುದೇ ಸಮಸ್ಯೆ ಇರಲಿಲ್ಲ’ ಎಂದು ಪತಿ ಡಾ.ರೂಪೇಶ್‌ ಕುಮಾರ್‌ ರೆಡ್ಡಿ ಹೇಳಿದ್ದಾರೆ. 

ಶಿಲ್ಪಾ ತಮ್ಮ ಫ್ಲ್ಯಾಟ್‌ನ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !