ಶನಿವಾರ, ಸೆಪ್ಟೆಂಬರ್ 21, 2019
21 °C

ಮುಂಬೈ ಒಎನ್‌ಜಿಸಿ ಘಟಕದಲ್ಲಿ ಅಗ್ನಿ ಅವಘಡ; 4 ಮಂದಿ ಸಾವು

Published:
Updated:

ಮುಂಬೈ: ನವಿ ಮುಂಬೈನಲ್ಲಿರುವ ಉರಣ್ ಒಎನ್‌ಜಿಸಿ ಘಟಕದಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆಗೆ  ಅಗ್ನಿ ಅವಘಡ ಸಂಭವಿಸಿದ್ದು 4 ಮಂದಿ ಸಾವಿಗೀಡಾಗಿದ್ದಾರೆ. ಘಟಕದೊಳಗೆ ಹಲವಾರು ಮಂದಿ ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ನ್ಯೂಸ್ 18 ಡಾಟ್ ಕಾಮ್ ವರದಿ ಮಾಡಿದೆ.

ಅಗ್ನಿಶಾಮಕದಳದವರು ಬೆಂಕಿ ನಂದಿಸುವ ಕಾರ್ಯ ಮುಂದುವರಿಸಿದೆ.ನೀರಿನ ನಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ತಕ್ಷಣವೇ ಅಗ್ನಿ ಶಾಮಕದಳದವರು ಬಂದು  ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ ಎಂದು ಒಎನ್‌ಜಿಸಿ ಹೇಳಿದೆ.

 ತೈಲ ಸಂಸ್ಕರಣೆ ಮೇಲೆ ಇದು ಪರಿಣಾಮ ಬೀರುವುದಿಲ್ಲ. ಈಗ ಅನಿಲವನ್ನು ಗುಜರಾತಿನ ಹಜರಿಯಾ ಘಟಕದತ್ತ ತಿರುಗಿಸಲಾಗಿದೆ ಎಂದು ಕಂಪನಿ ಹೇಳಿದೆ.
 

Post Comments (+)