ಸೋಮವಾರ, ಡಿಸೆಂಬರ್ 9, 2019
17 °C

ಪಾಕಿಸ್ತಾನ ಆರ್ಥಿಕ ಸಮಸ್ಯೆಗೆ ಚೀನಾ ಕಾರಣ: ಅಮೆರಿಕ ಆರೋಪ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಪಾಕಿಸ್ತಾನ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವುದಕ್ಕೆ ಚೀನಾ ದೇಶವೇ ಜವಾಬ್ದಾರಿ ಎಂದು ಅಮೆರಿಕ ಹರಿಹಾಯ್ದಿದೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅಮೆರಿಕದ ಸಾರ್ವಜನಿಕ ಆಡಳಿತ ಇಲಾಖೆಯ ವಕ್ತಾರೆ ಹೀಥರ್‌ ನೌರ್ಟ್‌, ‘ಪಾಕಿಸ್ತಾನದಲ್ಲಿ ಆರ್ಥಿಕ ಸಮಸ್ಯೆ ಉಲ್ಬಣಗೊಳ್ಳಲು ಚೀನಾದ ಸಾಲವೇ ಕಾರಣ. ಸಾಲವು ಇಷ್ಟು ಕಠಿಣ ಪರಿಸ್ಥಿತಿಗೆ ದೂಡುತ್ತದೆ ಎಂದು ಸರ್ಕಾರದವರು ಯೋಚಿಸಿರಲಿಲ್ಲ ಎನಿಸುತ್ತದೆ. ಆದರೆ, ಸಾಲ ಸಂಕಷ್ಟವನ್ನು ಹೆಚ್ಚಿಸಿದೆ’ ಎಂದು ದೂರಿದ್ದಾರೆ.

ಪಾಕಿಸ್ತಾನ ಸರ್ಕಾರವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ(ಐಎಂಎಫ್‌) ಆರ್ಥಿಕ ನೆರವು ಕೋರಿರುವುದನ್ನು ಉಲ್ಲೇಖಸಿದ ಅವರು, ‘ಆರ್ಥಿಕ ನೆರವು ಕೋರಿ ಪಾಕಿಸ್ತಾನವು ಐಎಂಎಫ್‌ಗೆ ಔಪಚಾರಿಕವಾಗಿ ಮನವಿ ಮಾಡಿರುವುದು ತಿಳಿದಿದೆ. ಪಾಕಿಸ್ತಾನದ ಸಾಲ ಪರಿಸ್ಥಿತಿಯನ್ನು ಎಲ್ಲ ಆಯಾಮಗಳಿಂದ ಪರಾಮರ್ಶಿಸಿ, ಕೈಗೊಳ್ಳಬಹುದಾದ ಆರ್ಥಿಕ ಕಾರ್ಯಕ್ರಮದ ಬಗ್ಗೆ ಚಿಂತಿಸಲಾಗುವುದು’ ಎಂದರು.

ಪಾಕಿಸ್ತಾನ ನೆರವು ಕೋರಿದ್ದ ವಿಚಾರವನ್ನು ಐಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟೀನ್ ಲಗಾರ್ಡೆ ಗುರುವಾರ ಖಚಿತ ಪಡಿಸಿದ್ದರು.

ಇದನ್ನೂ ಓದಿ: ಆರ್ಥಿಕ ಸಮಸ್ಯೆ: ಐಎಂಎಫ್‌ನಿಂದ ಹಣಕಾಸು ನೆರವು ಕೋರಿದ ಪಾಕಿಸ್ತಾನ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು