ಭಾರತ -ರಷ್ಯಾ ಒಪ್ಪಂದ: ಭಾರತಕ್ಕೆ ಮುನ್ನೆಚ್ಚರಿಕೆ ನೀಡಿದ ಅಮೆರಿಕ

7

ಭಾರತ -ರಷ್ಯಾ ಒಪ್ಪಂದ: ಭಾರತಕ್ಕೆ ಮುನ್ನೆಚ್ಚರಿಕೆ ನೀಡಿದ ಅಮೆರಿಕ

Published:
Updated:

ವಾಷಿಂಗ್ಟನ್/ ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಎರಡು ದಿನಗಳ ಭೇಟಿಗಾಗಿ ಗುರುವಾರ (ಸೆ.4) ಭಾರತಕ್ಕೆ ಅಗಮಿಸುತ್ತಿದ್ದು ಈ ಸಂದರ್ಭದಲ್ಲಿ ಎಸ್‌–400 ವಾಯು ಪ್ರದೇಶ ರಕ್ಷಣಾ ವ್ಯವಸ್ಥೆ ಕುರಿತು ಭಾರತ–ರಷ್ಯಾ ನಡುವೆ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ. ಆದರೆ ಈ ಒಪ್ಪಂದದ ಬಗ್ಗೆ ಅಮೆರಿಕ ಭಾರತಕ್ಕೆ ಮುನ್ನೆಚ್ಚರಿಕೆ ನೀಡಿದೆ.

ನಮ್ಮೊಂದಿಗೆ ಮೈತ್ರಿ ಹೊಂದಿರುವ ರಾಷ್ಟ್ರಗಳು ರಷ್ಯಾದೊಂದಿಗೆ ಒಪ್ಪಂದ ಮಾಡುವುದು ಬೇಡ ಎಂದು ಅಮೆರಿಕ ಮುನ್ನೆಚ್ಚರಿಕೆ ನೀಡಿದೆ.
19ನೇ ಭಾರತ-ರಷ್ಯಾ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಭಾಗವಹಿಸುವ ಸಲುವಾಗಿ ರಷ್ಯಾ ಅಧ್ಯಕ್ಷ ಪುಟಿನ್  ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.
ಅಮೆರಿಕದ ಎಲ್ಲ ಮಿತ್ರ ರಾಷ್ಟ್ರಗಳನ್ನುದ್ದೇಶಿಸಿ ನಾವು ಈ ಮಾತು ಹೇಳುತ್ತಿದ್ದೇವೆ. ರಷ್ಯಾದೊಂದಿಗೆ ಯಾವುದೇ ರೀತಿಯ ಒಪ್ಪಂದ ಮಾಡಬೇಡಿ. ಹಾಗೇನಾದರೂ ಮಾಡಿದರೆ ಸಿಎಎಟಿಎಸ್ಎ (Countering America's Adversaries Through Sanctions Act) ನಿಯಮ ಪ್ರಕಾರ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ಅಮೆರಿಕ ಸ್ಟೇಟ್ ಡಿಪಾರ್ಟ್‍ಮೆಂಟ್ ವಕ್ತಾರ ಹೇಳಿದ್ದಾರೆ.

ರಷ್ಯಾವನ್ನು ಗುರಿಯಾಗಿರಿಸಿ ಕಳೆದ ಆಗಸ್ಟ್ ತಿಂಗಳಲ್ಲಿ ಸಿಎಎಟಿಎಸ್ಎ ನಿಯಮವನ್ನು ಅಮೆರಿಕ ರೂಪಿಸಿತ್ತು. ರಷ್ಯಾದಿಂದ ಯುದ್ಧ ವಿಮಾನಗಳು ಮತ್ತು ಕ್ಷಿಪಣಿಗಳನ್ನು ಖರೀದಿಸುವುದಕ್ಕೆ ಚೀನಾ ವಿರುದ್ಧ ಇತ್ತೀಚೆಗೆ ನಿರ್ಬಂಧ ಹೇರಲಾಗಿತ್ತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತಮ ಬಾಂಧವ್ಯ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ, ಆದರೆ ಅದರಲ್ಲಿ ಸಫಲವಾಗಿಲ್ಲ ಎಂದು ರಷ್ಯಾವನ್ನುದ್ದೇಶಿಸಿ ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಮೈಕ್ ಪೊಂಪೆಯೊ ಹೇಳಿದ್ದಾರೆ.

ಅಮೆರಿಕದ ಬೆದರಿಕೆಯನ್ನು ತಳ್ಳಿ ರಷ್ಯಾದೊಂದಿಗೆ ಆಯುಧ ಒಪ್ಪಂದ ಮಾಡಿಕೊಳ್ಳುವ ಉದ್ದೇಶವನ್ನು ಭಾರತ ಹೊಂದಿದೆ. ಅದೇ ವೇಳೆ ಇರಾನ್‌ದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಬಗ್ಗೆ ಅಮೆರಿಕದ ನಿರ್ಬಂಧಗಳು ಸೇರಿದಂತೆ ಪ್ರಾದೇಶಿಕ ಹಾಗೂ ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ.
 

ಬರಹ ಇಷ್ಟವಾಯಿತೆ?

 • 22

  Happy
 • 0

  Amused
 • 2

  Sad
 • 1

  Frustrated
 • 3

  Angry

Comments:

0 comments

Write the first review for this !