ಶನಿವಾರ, ಜನವರಿ 25, 2020
16 °C

ನಾನೇ ಸುರಕ್ಷಿತಳಲ್ಲ... ಬೇರೆ ಹೆಣ್ಣುಮಕ್ಕಳಿಗೆ ಹೇಗೆ ರಕ್ಷಣೆ ನೀಡಲಿ? ಮಹಿಳಾ ಪೇದೆ

ಏಜನ್ಸೀಸ್‌ Updated:

ಅಕ್ಷರ ಗಾತ್ರ : | |

ಲಖನೌ: ಮೇಲಧಿಕಾರಿಗಳು ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಮಹಿಳಾ ಕಾನ್ಸ್‌ಟೇಬಲ್‌ವೊಬ್ಬರು ವಿಡಿಯೊ ಮಾಡಿ  ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಕಾನ್‌ಸ್ಟೇಬಲ್‌, ಸಮವಸ್ತ್ರದಲ್ಲಿದ್ದುಕೊಂಡೇ ಇಲಾಖೆಯ ತಮ್ಮ ಹಿರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಿಡಿಯೊ ಮಾಡಿದ್ದಾರೆ. 

‘ನಾನು ಕೆಲಸ ಮಾಡುವ ಪೊಲೀಸ್‌ ಇಲಾಖೆಯಲ್ಲಿ ನಾನೇ ಸುರಕ್ಷಿತವಲ್ಲದೇ ಇರುವಾಗ ಸಂಕಷ್ಟದಲ್ಲಿರುವ ಇತರ ಮಹಿಳೆಯರನ್ನು ನಾನು ಹೇಗೆ ರಕ್ಷಿಸಲು ಸಾಧ್ಯ? ನಾನೇ ಸಂತ್ರಸ್ತೆಯಾಗಿರುವಾಗ, ನನಗೇ ನ್ಯಾಯ ಸಿಗದೇ ಇರುವಾಗ ಇತರ ಸಂತ್ರಸ್ತರಿಗೆ ನಾನು ಹೇಗೆ ನ್ಯಾಯ ಕಲ್ಪಿಸಲು ಸಾಧ್ಯ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.  

‘ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ದೂರು ದಾಖಲಿಸಲು ಪೊಲೀಸ್‌  ಹಿರಿಯ ಸೂಪರಿಂಡೆಂಟ್‌ ಕಚೇರಿಗೆ ಹೋದರೆ ಅಲ್ಲಿನ ಪಿಆರ್‌ಒ ನನ್ನನ್ನು ತಡೆಯುತ್ತಿದ್ದಾರೆ.  ಕಚೇರಿ ಒಳಗೆ ಹೋಗಲೂ ಅವಕಾಶ ನೀಡುತ್ತಿಲ್ಲ. ಕಿರುಕುಳ ನೀಡುತ್ತಿರುವವರ ಪರವಾಗಿ ಪಿಆರ್‌ಒ ಕೆಲಸ ಮಾಡುತ್ತಿದ್ದಾರೆ,’ ಎಂದು ಅವರು ಆರೋಪಿಸಿದ್ದಾರೆ. 

‘ವಿಡಿಯೊ ಉತ್ತರ ಪ್ರದೇಶದಲ್ಲಿ ವೈರಲ್‌ ಆಗುತ್ತಲೇ ಎಚ್ಚೆತ್ತುಕೊಂಡಿರುವ ಪೊಲೀಸ್‌ ಇಲಾಖೆ ಕ್ರಮಕ್ಕೆ ಆದೇಶಿಸಿದೆ. ತನಿಖೆಗೆ ಆದೇಶಿಸಿರುವ ಪೊಲೀಸ್‌ ಇಲಾಖೆ,  ಎಸ್‌ಪಿ ದರ್ಜೆಯ ಅಧಿಕಾರಿ ರುಚಿತಾ ಚೌದರಿ ಅವರ ನೇತೃತ್ವದಲ್ಲಿ ವಿಚಾರಣೆ ನಡೆಯಬೇಕು ಎಂದು ಸೂಚಿಸಿದೆ. ಅಲ್ಲದೆ, ಮೂರು ದಿನಗಳಲ್ಲಿ ಇಲಾಖೆಗೆ ವರದಿ ನೀಡಬೇಕು,’ ಎಂದಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು