ಮಂಗಳವಾರ, ಏಪ್ರಿಲ್ 13, 2021
29 °C

ಉತ್ತರ ಪ್ರದೇಶ | ‘ಜೈಶ್ರೀರಾಂ’ ಎನ್ನದವರ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಉತ್ತರ ಪ್ರದೇಶದ ಉನ್ನಾವೊ ಪಟ್ಟಣದಲ್ಲಿ ‘ಜೈಶ್ರೀರಾಂ’ ಎಂಬ ಘೋಷಣೆ ಕೂಗಲು ನಿರಾಕರಿಸಿದ ಮದರಸದ ನಾಲ್ವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದ ಇಬ್ಬರು ಯುವಕರಲ್ಲಿ ಒಬ್ಬರು ಬಿಜೆಪಿ ಯುವಮೋರ್ಚಾದ ಜಿಲ್ಲಾ ಸಮಿತಿಯ ಕಾರ್ಯದರ್ಶಿ. ಈ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಈ ಹುಡುಗರು ಮೈದಾನದಲ್ಲಿ ಕ್ರಿಕೆಟ್‌ ಆಡುತ್ತಿದ್ದರು. ಆಗ ಅಲ್ಲಿಗೆ ಬಂದ ಯುವಕರು ಅವರ ಬ್ಯಾಟ್‌ ಕಸಿದುಕೊಂಡು ‘ಜೈಶ್ರೀರಾಂ’ ಘೋಷಣೆ ಕೂಗುವಂತೆ ಹೇಳಿದರು. ‘ಘೋಷಣೆ ಕೂಗಲು ನಿರಾಕರಿಸಿದಾಗ ಬ್ಯಾಟ್‌ನಿಂದಲೇ ಹೊಡೆದರು. ನಾವು ಓಡಿದಾಗ ನಮ್ಮತ್ತ ಅವರು ಕಲ್ಲೆಸೆದರು’ ಎಂದು ಹುಡುಗನೊಬ್ಬ ಹೇಳಿದ್ದಾನೆ. 

ಯುವಕರನ್ನು ಬಂಧಿಸಿದ ಬಳಿಕ ಪಟ್ಟಣದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣ ವಾಗಿತ್ತು. ಬಿಜೆಪಿಯ ನೂರಾರು ಕಾರ್ಯಕರ್ತರು ಕೊತ್ವಾಲಿ ಪೊಲೀಸ್‌ ಠಾಣೆಯನ್ನು ಸುತ್ತುವರಿದು ಯುವಕರಿಬ್ಬರನ್ನೂ ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಹಾಗಾಗಿ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ದೊಡ್ಡ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಯಿತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು