ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡದಲ್ಲಿ ದೆವ್ವದ ಗ್ರಾಮ ಈಗ ಕ್ವಾರಂಟೈನ್ ಕೇಂದ್ರ 

Last Updated 15 ಮೇ 2020, 12:33 IST
ಅಕ್ಷರ ಗಾತ್ರ

ಡೆಹ್ರಾಡೂನ್: ಉತ್ತರಾಖಂಡದಪೌರಿ ಜಿಲ್ಲೆಯಲ್ಲಿ ದೆವ್ವದ ಗ್ರಾಮ ಇದೆ. ಜನರು ಬಿಟ್ಟು ಹೋಗಿರುವ ಮನೆಗಳು ಇಲ್ಲಿರುವುದರಿಂದ ದೆವ್ವದ ಗ್ರಾಮ ಎಂದು ಇದನ್ನು ಕರೆಯಲಾಗುತ್ತಿದೆ. ಅಂದಹಾಗೆ ಉತ್ತರಾಖಂಡಕ್ಕೆ ವಾಪಸ್ ಬರುವ ವಲಸೆ ಕಾರ್ಮಿಕರಿಗಾಗಿ ಈ ದೆವ್ವದ ಗ್ರಾಮವನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಲು ಇಲ್ಲಿನ ಆಡಳಿತ ಸಂಸ್ಥೆ ತೀರ್ಮಾನಿಸಿದೆ.

ರಾಜ್ಯದ ಹೊರಗಿನಿಂದ ಹಲವಾರು ಜನರು ಬರುತ್ತಿದ್ದು, ಅವರಿಗೆ ಸೌಕರ್ಯ ಒದಗಿಸಲು ಇಲ್ಲಿನ ಮನೆಗಳನ್ನು ಸ್ವಚ್ಛ ಮಾಡಿ ಬಳಸಲಾಗುತ್ತಿದೆ ಎಂದು ಪೌರಿ ಜಿಲ್ಲೆಯ ರಿಖ್ನಿಖಲ್ ಬ್ಲಾಕ್ ಬಿಡಿಒ ಎಸ್.ಪಿ.ಥಪ್ಲಿಯಾಲ್ ಹೇಳಿದ್ದಾರೆ.

ಮೂಲಸೌಕರ್ಯಗಳ ಕೊರತೆ, ಜೀವನ ನಿರ್ವಹಣೆಗೆ ಕಷ್ಟ ಮತ್ತು ನಿರುದ್ಯೋಗ ಸಮಸ್ಯೆಯಿಂದಾಗಿ ಇಲ್ಲಿನ ಗ್ರಾಮದ ಜನರು ಸಾಮೂಹಿಕವಾಗಿ ವಲಸೆ ಹೋಗಿದ್ದರಿಂದ ಹಲವು ವರ್ಷಗಳ ಕಾಲ ಇಲ್ಲಿನ ಮನೆಗಳು ಪಾಳು ಬಿದ್ದಿವೆ.ಊರಿಗೆ ಮರಳಿರುವ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲು ಶಾಲಾ ಕಟ್ಟಡ ಅಥವಾ ಪಂಚಾಯತ್ ಭವನಗಳನ್ನು ಬಳಸಲಾಗುತ್ತದೆ.ಗ್ರಾಮದ ಪ್ರಮುಖ ಪ್ರದೇಶಗಳಲ್ಲಿ ವಲಸೆ ಕಾರ್ಮಿಕರಿಗೆ ಕ್ವಾರಂಟೈನ್ ಕಲ್ಪಿಸಿದರೆ ಅಲ್ಲಿನ ಸ್ಥಳೀಯರಿಗೂ ಸೋಂಕು ತಗುಲುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಗ್ರಾಮದಿಂದ ದೂರ ವಲಸೆ ಕಾರ್ಮಿಕರನ್ನು ಕ್ವಾರಂಟೈನ್‌ನಲ್ಲಿರಿಸಲು ನಿರ್ಧರಿಸಲಾಗಿದೆ.

ಪೌರಿ ಜಿಲ್ಲೆಯಲ್ಲಿ ಈವರೆಗೆ ಖಾಲಿ ಮನೆಗಳಲ್ಲಿ 576 ಮಂದಿ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದೆ. ರಾಜ್ಯದಲ್ಲಿ 186 ದೆವ್ವದ ಗ್ರಾಮಗಳು ಇವೆ ಎಂದು ತಪಲಿಯಾಲ್ ಹೇಳಿದ್ದಾರೆ.

ಈ ಮನೆಗಳನ್ನು ಮೊದಲು ಸ್ವಚ್ಛ ಮಾಡಿ, ಸ್ಯಾನಿಟೈಜ್ ಮಾಡಿದ ನಂತರವೇ ಅವುಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಬರುತ್ತಿರುವುದರಿಂದ ಕ್ವಾರಂಟೈನ್ ಮಾಡಲು ಸ್ಥಳಾವಕಾಶದ ಕೊರತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲವು ವಲಸೆ ಕಾರ್ಮಿಕರು ದಶಕಗಳ ನಂತರ ಊರಿಗೆ ಮರಳುತ್ತಿದ್ದು, ಅವರ ಪೂರ್ವಜರ ಮನೆಗಳು ಭಾಗಶಃ ಅಥವಾ ಸಂಪೂರ್ಣ ನಾಶವಾಗಿ ಹೋಗಿವೆ.ಅವರನ್ನು ಪಂಚಾಯತ್ ಭವನ್ ಮತ್ತು ಶಾಲಾ ಕಟ್ಟಡಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಒಂದು ವೇಳೆ ವಲಸೆ ಕಾರ್ಮಿಕರ ಸಂಖ್ಯೆ ಜಾಸ್ತಿ ಆದರೆ ಅವರನ್ನು ದೆವ್ವದ ಗ್ರಾಮದಲ್ಲಿ ಕ್ವಾರಂಟೈನ್ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೇ.13ರ ವರೆಗೆ ಪೌರಿ ಜಿಲ್ಲೆಯ 1,049 ಗ್ರಾಮ ಪಂಚಾಯತ್‌ಗಳಲ್ಲಿ ಒಟ್ಟು 19,846 ವಲಸೆ ಕಾರ್ಮಿಕರು ಹೊರ ರಾಜ್ಯಗಳಿಂದ ವಾಪಸ್ ಬಂದಿದ್ದಾರೆ. ಇನ್ನೂ ಇವರ ಸಂಖ್ಯೆ ಹೆಚ್ಚಲಿದೆ ಎಂದು ಜಿಲ್ಲಾ ಮಾಹಿತಿ ಕೇಂದ್ರ ಕಚೇರಿಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT