ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19| ತಬ್ಲೀಗಿ ಜಮಾತ್‌ನ ಪಾತ್ರ ಖಂಡನೀಯ: ಯೋಗಿ ಆದಿತ್ಯನಾಥ

Last Updated 3 ಮೇ 2020, 5:12 IST
ಅಕ್ಷರ ಗಾತ್ರ

ಲಖನೌ: ಕೋವಿಡ್-19 ರೋಗ ಹರಡುವುದಕ್ಕೆ ತಬ್ಲೀಗಿ ಜಮಾತ್ ಕಾರಣ ಎಂದು ಹೇಳಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ವೈರಸ್ ಸೋಂಕಿಗೊಳಗಾಗುವುದು ಅಪರಾಧವಲ್ಲ ಆದರೆ ಅದನ್ನು ಮುಚ್ಚಿಟ್ಟಿದ್ದು ಅಪರಾಧ ಎಂದಿದ್ದಾರೆ.

ಶನಿವಾರ ಸುದ್ದಿ ಮಾಧ್ಯಮದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆದಿತ್ಯನಾಥ, ತಬ್ಲೀಗಿ ಜಮಾತ್‌ನ ಪಾತ್ರ ಖಂಡನೀಯ. ರೋಗ ಅಪರಾಧವಲ್ಲ, ಆದರೆ ಹರಡುವ ರೋಗವೊಂದನ್ನು ಮುಚ್ಚಿಟ್ಟಿದ್ದು ಅಪರಾಧ. ಈ ಅಪರಾಧವನ್ನು ತಬ್ಲೀಗಿ ಜಮಾತ್‌ಗೆ ಸಂಬಂಧಿಸಿದವರು ಮಾಡಿದ್ದಾರೆ.

ಉತ್ತರ ಪ್ರದೇಶ ಮತ್ತು ದೇಶದ ಇತರ ಭಾಗಗಳಲ್ಲಿರೋಗ ಹರಡುವಿಕೆಗೆ ತಬ್ಲೀಗಿ ಜಮಾತ್‌ನವರೇ ಕಾರಣ. ಅವರು ರೋಗವನ್ನು ಮುಚ್ಚಿಟ್ಟು ಸೋಂಕು ವಾಹಕರು ಆಗದೇ ಇರುತ್ತಿದ್ದರೆ ಸೋಂಕು ಅಷ್ಟೊಂದು ಹರಡುತ್ತಿರಲಿಲ್ಲ. ಅವರು ಮಾಡಿದ ಅಪರಾಧದದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ ಆದಿತ್ಯನಾಥ.

ಮಾರ್ಚ್‌ನಲ್ಲಿ ದೆಹಲಿಯಲ್ಲಿ ತಬ್ಲೀಗಿ ಜಮಾತ್ಸಭೆನಡೆದಿದ್ದು, ಕೋವಿಡ್ -19 ಸೋಂಕಿತರು ಅಲ್ಲಿ ಭಾಗವಹಿಸಿದ್ದರು.ಸೋಂಕಿತರೊಂದಿಗೆ ಒಡನಾಡಿದ್ದ ಜನರು ಊರಿಗೆ ಬಂದಾಗ ಸೋಂಕು ಅವರ ಮೂಲಕ ಮತ್ತೊಬ್ಬರಿಗೂ ಹರಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT