‘ಶಾಲೆಯ ಹೆಸರು ಹಾಳುಗೆಡವಲು ವಿದ್ಯಾರ್ಥಿ ಹತ್ಯೆ’

7
ಆರೋಪಿಯಿಂದ ತಪ್ಪೊಪ್ಪಿಗೆ ಹೇಳಿಕೆ

‘ಶಾಲೆಯ ಹೆಸರು ಹಾಳುಗೆಡವಲು ವಿದ್ಯಾರ್ಥಿ ಹತ್ಯೆ’

Published:
Updated:

ವಡೋದರಾ: ‘ಶಿಕ್ಷಣ ಸಂಸ್ಥೆಯ ಹೆಸರನ್ನು ಹಾಳುಗೆಡವುದಕ್ಕಾಗಿಯೇ, ಕಿರಿಯ ವಿದ್ಯಾರ್ಥಿಯನ್ನು ಹತ್ಯೆಗೈದಿರುವುದಾಗಿ ತನಿಖಾಧಿಕಾರಿಗಳ ಮುಂದೆ ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ’ ಭಾನುವಾರ ಪೊಲೀಸರು ತಿಳಿಸಿದರು.

‘11 ನೇ ತರಗತಿಯ ವಿದ್ಯಾರ್ಥಿಯು ಹೋಮ್‌ವರ್ಕ್‌ ಮಾಡದ ಕಾರಣಕ್ಕಾಗಿ ಶಿಕ್ಷಕಿಯು ನಿಂದಿಸಿದ್ದರು. ಇದರಿಂದ ಸಿಟ್ಟಿಗೆದ್ದ ಆತ ಈ ಕೃತ್ಯವೆಸಗಿದ್ದಾನೆ, ಆದರೆ ತಾನು ಕೊಂದ ವಿದ್ಯಾರ್ಥಿಯೂ ಆರೋಪಿಗೆ ಪರಿಚಯವಿರಲಿಲ್ಲ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

17 ವರ್ಷದ ಬಾಲಾರೋಪಿಯನ್ನು ಶುಕ್ರವಾರ ರಾತ್ರಿ ವಲ್ಸಾಡ್‌ನಲ್ಲಿ ಪೊಲೀಸರು ಬಂಧಿಸಿದ್ದರು,

‘ಕೊಲೆ ನಡೆಸಿದ ಬಳಿಕ ಆತ ಆಗಾಗ್ಗೆ ಜಾಗ ಬದಲಾಯಿಸಿದ್ದ. ಬಂಧನದ ಬಳಿಕ ಕೊಲೆ ನಡೆಸಿದ್ದ ವೇಳೆ ಆತ ಧರಿಸಿದ್ದ ಬಟ್ಟೆಯನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಶುಕ್ರವಾರ ವಡೋದರಾದ ಖಾಸಗಿ ಶಾಲೆಯಲ್ಲಿ 9 ತರಗತಿಯ ವಿದ್ಯಾರ್ಥಿಯನ್ನು ಚೂರಿಯಿಂದ ಇರಿದು ಹತ್ಯೆಗೈದಿದ್ದನು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !