ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾದ್ರಾಗೆ ಸೇರಿದ ₹ 4.6 ಕೋಟಿ ಮೌಲ್ಯದ ಆಸ್ತಿ ವಶ

ಬಿಕಾನೇರ್‌ ಭೂ ಹಗರಣ ಸಂಬಂಧ ಇ.ಡಿ ಕ್ರಮ
Last Updated 15 ಫೆಬ್ರುವರಿ 2019, 16:55 IST
ಅಕ್ಷರ ಗಾತ್ರ

ನವದೆಹಲಿ: ಬಿಕಾನೇರ್‌ ಭೂ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ರಾಬರ್ಟ್‌ ವಾದ್ರಾಗೆ ಸೇರಿದ ₹ 4.62 ಕೋಟಿ ಮೌಲ್ಯದ ಆಸ್ತಿಯನ್ನು ಶುಕ್ರವಾರ ವಶಪಡಿಸಿಕೊಂಡಿದೆ.

‘ನವದೆಹಲಿಯ ಸುಖದೇವ್‌ ವಿಹಾರ್‌ ಪ್ರದೇಶದಲ್ಲಿ ವಾದ್ರಾ ಒಡೆತನದ ಸ್ಕೈಲೈಟ್‌ ಹಾಸ್ಪಿಟ್ಯಾಲಿಟಿ ಪ್ರೈ.ಲಿ.ಗೆ ಸೇರಿದ ₹ 4,43,36,550 ಮೌಲ್ಯದ ಸ್ಥಿರಾಸ್ತಿ ಹಾಗೂ ₹ 18,59,500 ಮೌಲ್ಯದ ಚರಾಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಇ.ಡಿ ಮೂಲಗಳು ತಿಳಿಸಿವೆ.

ಭಾರತ ಮತ್ತು ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಕಾರಣ ಅತ್ಯಂತ ಸೂಕ್ಷ್ಮ ಎಂದೇ ಪರಿಗಣಿಸಲಾಗಿರುವ ಜಮೀನನ್ನು ನಕಲಿ ಸಹಿ ಮಾಡುವ ಮೂಲಕ ವಾದ್ರಾ ಒಡೆತನದ ಕಂಪನಿಗೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಬಿಕಾನೇರ್‌ ತಹಶೀಲ್ದಾರ್‌ ನೀಡಿದ್ದ ದೂರಿನ ಅನ್ವಯ ರಾಜಸ್ಥಾನ ಪೊಲೀಸರು ಎಫ್‌ಐಆರ್‌ ದಾಖಲಿಸಿ, ದೋಷಾರೋಪಪಟ್ಟಿ ಸಲ್ಲಿಸಿದ್ದರು. ನಂತರ, 2015ರಲ್ಲಿ ಇ.ಡಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT