ಅಂತರರಾಷ್ಟ್ರೀಯ ಸಂಬಂಧ ಸುಧಾರಿಸಿದ ಅಟಲ್‌

7

ಅಂತರರಾಷ್ಟ್ರೀಯ ಸಂಬಂಧ ಸುಧಾರಿಸಿದ ಅಟಲ್‌

Published:
Updated:
Deccan Herald

ನಿರ್ಬಂಧ ಸಡಿಲಿಕೆ

1998ರಲ್ಲಿ ಅಣ್ವಸ್ತ್ರ ಪರೀಕ್ಷೆ ನಂತರ ಅಮೆರಿಕವು ಭಾರತದ ಮೇಲೆ ದಿಗ್ಬಂಧನ ಹೇರಿತ್ತು. ಆದರೆ 2000ರ ಮಾರ್ಚ್‌ನಲ್ಲಿ ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡಿದ್ದರು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ವಾಜಪೇಯಿ ಅವರೂ ಅಮೆರಿಕಕ್ಕೆ ಭೇಟಿ ನಿಡಿದ್ದರು. ಈ ಭೇಟಿಗಳ ಫಲವಾಗಿ ದಿಗ್ಬಂಧನವನ್ನು ಅಮೆರಿಕ ಸಡಿಲಿಸಿತ್ತು. ಅಮೆರಿಕದ ಜತೆಗೆ ಪರಮಾಣು ಸಹಕಾರ ಒಪ್ಪಂದ ಮಾಡಿಕೊಳ್ಳುವ ಸಂಬಂಧ ಮಾತುಕತೆಯನ್ನು ಆರಂಭಿಸಿದ ಶ್ರೇಯವೂ ವಾಜಪೇಯಿ ಅವರಿಗೆ ಸಲ್ಲುತ್ತದೆ.

ರಷ್ಯಾ ಶೃಂಗಸಭೆ

2000ರಲ್ಲಿ ರಷ್ಯಾವು ಮೊದಲ ಬಾರಿ ನವದೆಹಲಿಯಲ್ಲಿ ತನ್ನ ವಾರ್ಷಿಕ ಶೃಂಗಸಭೆ ನಡೆಸಿತ್ತು. ರಷ್ಯಾದ ಅಂದಿನ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನವದೆಹಲಿಗೆ ಭೇಟಿ ನೀಡಿದ್ದರು. ಎರಡೂ ದೇಶಗಳ ಸಂಬಂಧ ಗಟ್ಟಿಗೊಳ್ಳುವಲ್ಲಿ ಈ ಭೇಟಿ ಮಹತ್ವದ ಪಾತ್ರವಹಿಸಿದೆ ಎಂದು ಪರಿಗಣಿಸಲಾಗಿದೆ. ನಂತರ ರಷ್ಯಾ 17 ವಾರ್ಷಿಕ ಶೃಂಗಸಭೆಗಳನ್ನು ಭಾರತದಲ್ಲಿ ನಡೆಸಿದೆ. 18ನೇ ಶೃಂಗಸಭೆ ಈ ವರ್ಷ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !