ಕೈದಿಗಳ ಮನಪರಿವರ್ತನೆಗೆ ಅಟಲ್‌ ಕವನಗಳ ಬಳಕೆ: ಪ್ರಸ್ತಾವ

7

ಕೈದಿಗಳ ಮನಪರಿವರ್ತನೆಗೆ ಅಟಲ್‌ ಕವನಗಳ ಬಳಕೆ: ಪ್ರಸ್ತಾವ

Published:
Updated:

ಲಖನೌ: ‘ಉತ್ತರ ಪ್ರದೇಶ ಜೈಲುಗಳಲ್ಲಿ ಅಟಲ್‌ಜೀಯವರ ಕವನಗಳನ್ನು ಮತ್ತು ಅವರ ಜೀವನಚರಿತ್ರೆಯನ್ನು ಹೇಳುವ ವ್ಯವಸ್ಥೆ ಮಾಡಿದರೆ, ಅನೇಕ ಕೈದಿಗಳ ಮನಪರಿವರ್ತನೆಯಾಗಲಿದ್ದು, ಅವರು ಮತ್ತೆ ಸಮಾಜದ ಮುಖ್ಯವಾಹಿನಿಗೆ ಬರಲು ಸಹಾಯವಾಗಬಹುದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಉತ್ತರ ಪ್ರದೇಶದ ಬಂದೀಖಾನೆ ಸಚಿವ ಜೈ ಕುಮಾರ್‌ ಜೈಕಿ ಹೇಳಿದ್ದಾರೆ. 

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ರಚಿಸಿರುವ ಕವನಗಳು ದಶಕಗಳ ಕಾಲ ಬಿಜೆಪಿ ಕಾರ್ಯಕರ್ತರಿಗೆ ಸ್ಫೂರ್ತಿಯ ಚಿಲುಮೆಗಳಂತೆ ಕೆಲಸ ಮಾಡಿವೆ. ಆ ಕವನಗಳನ್ನು ಜೈಲಿನಲ್ಲಿ ಕೇಳಿಸುವಂತಾದರೆ ಕೈದಿಗಳ ಮೇಲೆ ಅವು ಸಕಾರಾತ್ಮಕ ಪರಿಣಾಮ ಬೀರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ವಾಜಪೇಯಿಯವರ 93ನೇ ಜನ್ಮದಿನದ ಅಂಗವಾಗಿ, ಸನ್ನಡತೆ ಆಧಾರದ ಮೇಲೆ 93 ಕೈದಿಗಳನ್ನು ಉತ್ತರ ಪ್ರದೇಶ ಸರ್ಕಾರ ಬಿಡುಗಡೆ ಮಾಡಲಾಗಿತ್ತು. ಆದರೆ, ಅವರ ಮೇಲೆ ಹೇರಿದ್ದ ದಂಡವನ್ನು ಪಾವತಿಸಲಾಗದ ಕಾರಣ ಅವರ ಬಿಡುಗಡೆ ಇನ್ನೂ ಆಗಿಲ್ಲ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !